ADVERTISEMENT

ಬೇತಮಂಗಲ: ಸೇತುವೆ ಜನಾರ್ಪಣೆ ಕಾರ್ಯಕ್ರಮ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 4:47 IST
Last Updated 25 ಜುಲೈ 2025, 4:47 IST
ಬೇತಮಂಗಲ ಗ್ರಾಮದಿಂದ ನಲ್ಲೂರು ಮೂಲಕ ಕಲ್ಲುಕುಪ್ಪ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜನಾರ್ಪಣೆಗೆ ಸಿದ್ಧವಾಗಿರುವುದು 
ಬೇತಮಂಗಲ ಗ್ರಾಮದಿಂದ ನಲ್ಲೂರು ಮೂಲಕ ಕಲ್ಲುಕುಪ್ಪ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜನಾರ್ಪಣೆಗೆ ಸಿದ್ಧವಾಗಿರುವುದು    

ಬೇತಮಂಗಲ: ನಲ್ಲೂರು ಗ್ರಾಮದ ಮಾರ್ಗವಾಗಿ ಕಳ್ಳಿಕುಪ್ಪ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ನಿರ್ಮಿಸಿರುವ ಸೇತುವೆ ಶುಕ್ರವಾರದಂದು ಜನಾರ್ಪಣೆಗೆ ನಿಗದಿಪಡಿಸಿದ್ದ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನು ಕಾರ್ತಿಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಜುಲೈ 25ರಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ₹7 ಕೋಟಿ ವೆಚ್ಚದದಲ್ಲಿ ಪಾಲಾರ್ ಕೆರೆಯಲ್ಲಿ ನಿರ್ಮಿಸಿರುವ ಸೇತುವೆ ಉದ್ಘಾಟಿಸಲಿದ್ದರು. ಆದರೆ, ಕಾರ್ಯಕ್ರಮ ಮುಂದೂಡಲಾಗಿದ್ದು, ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಅಧ್ಯಕ್ಷತೆಯಲ್ಲಿ ದಿನಾಂಕ ನಿಗದಿಪಡಿಸಿ ಜನಾರ್ಪಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಭಾಗದ ಜನರ ಕನಸಾಗಿದ್ದ ಸೇತುವೆ ಹಾಗೂ ರಸ್ತೆ ಕಾಮಗಾರಿ ಉದ್ಘಾಟನೆಗೆ ಭರ್ಜರಿ ಸಿದ್ಧತೆ ನಡೆದಿದೆ. ಸಚಿವ ಸತೀಶ್ ಜಾರಕಿಹೊಳಿ, ಸಚಿವ ಕೆಎಚ್ ಮುನಿಯಪ್ಪ ಸೇರಿದಂತೆ ವಿವಿಧ ಗಣ್ಯರ ಕಟೌಟ್‌, ಬ್ಯಾನರ್‌ ಅಳವಡಿಸಲಾಗಿದೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.