ADVERTISEMENT

ಮುಳಬಾಗಿಲು: ತಿರಂಗಾ ಬೈಕ್ ಜಾಥಾ

​ಪ್ರಜಾವಾಣಿ ವಾರ್ತೆ
Published 22 ಮೇ 2025, 13:15 IST
Last Updated 22 ಮೇ 2025, 13:15 IST
ಪಾಕಿಸ್ತಾನದ ಮೇಲೆ ನಮ್ಮ ದೇಶದ ಸೈನಿಕರ ಗೆಲುವಿನ ನೆನಪಿಗಾಗಿ ಮುಳಬಾಗಿಲಿನಲ್ಲಿ ತಿರಂಗಾ ಬೈಕ್ ಜಾಥಾ ನಡೆಯಿತು 
ಪಾಕಿಸ್ತಾನದ ಮೇಲೆ ನಮ್ಮ ದೇಶದ ಸೈನಿಕರ ಗೆಲುವಿನ ನೆನಪಿಗಾಗಿ ಮುಳಬಾಗಿಲಿನಲ್ಲಿ ತಿರಂಗಾ ಬೈಕ್ ಜಾಥಾ ನಡೆಯಿತು    

ಮುಳಬಾಗಿಲು: ಇತ್ತೀಚೆಗೆ ಪಾಕಿಸ್ತಾನದ ಮೇಲೆ ನಡೆದ ಯುದ್ಧದಲ್ಲಿ ನಮ್ಮ ಸೈನಿಕರ ಗೆಲುವಿನ ಕಾರ್ಯಾಚರಣೆ ಅಂಗವಾಗಿ ಮುಳಬಾಗಿಲಿನಲ್ಲಿ 200ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಲ್ಲಿ ತಿರಂಗಾ ಬೈಕ್ ಜಾಥಾ ನಡೆಸಲಾಯಿತು.

ಬೈಕ್‌ ಜಾಥಾಗೂ ಮೊದಲು ಪ್ರಸನ್ನ ಸೋಮೇಶ್ವರ ದೇವಾಲಯದಲ್ಲಿ ಪೂಜೆ ನಡೆಸಿ, ನಂತರ ಯುವಕರು ದ್ವಿಚಕ್ರ ವಾಹನದಲ್ಲಿ ತ್ರಿವರ್ಣ ಧ್ವಜಗಳನ್ನು ಹಿಡಿದು ನಗರದ ಹೊರವಲಯದ ಹೌಸಿಂಗ್ ಬೋರ್ಡ್‌ನಿಂದ ಸೋಮೇಶ್ವರ ಪಾಳ್ಯ, ಅಂಬೇಡ್ಕರ್ ವೃತ್ತ, ಎಂ.ಸಿ.ರಸ್ತೆ, ಡಿವಿಜಿ ವೃತ್ತ, ಕೆಇಬಿ ವೃತ್ತ, ಬಸ್ ನಿಲ್ದಾಣ, ತಾಲ್ಲೂಕು ಕಚೇರಿ ರಸ್ತೆ, ಸಂಗಂ ಟಾಕೀಸ್ ರಸ್ತೆ, ನಂಗಲಿ ರಸ್ತೆ ಮತ್ತಿತರ ಕಡೆಗಳಲ್ಲಿ ರ್‍ಯಾಲಿ ನಡೆಸಿದರು. ರ್‍ಯಾಲಿಯುದ್ದಕ್ಕೂ ಭಾರತ್ ಮಾತಾಕಿ ಜೈ, ಜೈ ಜವಾನ್ ಜೈ ಕಿಸಾನ್ ಮತ್ತಿತರ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.

ಈ ವೇಳೆ ಹಿರಿಯ ವಕೀಲ ಎಂ.ಎಸ್.ಶ್ರೀನಿವಾಸ ರೆಡ್ಡಿ ಮಾತನಾಡಿ, ಅಮಾಯಕರನ್ನು ಬಲಿ ತೆಗೆದುಕೊಂಡ ಉಗ್ರವಾದಿಗಳ ಸಂಪೂರ್ಣ ನಾಶಕ್ಕೆ ದೇಶ ಮತ್ತಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೈನಿಕರಿಗೆ ಎಲ್ಲರೂ ಗೌರವ ಸಲ್ಲಿಸಬೇಕು ಎಂದು ಹೇಳಿದರು.

ADVERTISEMENT

ನಗರ ಠಾಣೆ ಇನ್‌ಸ್ಪೆಕ್ಟರ್ ರಾಜಣ್ಣ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಿದ್ದರು.

ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಮಂಡಿಕಲ್ ಎಂ.ಎಸ್.ಮಂಜುನಾಥ್, ಪ್ರಕಾಶ್ ರೆಡ್ಡಿ, ಕೀಲಾಗಾಣಿ ಮಂಜುನಾಥ ಸ್ವಾಮಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.