ಕೆಜಿಎಫ್: ನಗರದ ಗೌತಮ ನಗರದಲ್ಲಿರುವ ಬುದ್ಧ ವಿಹಾರದಲ್ಲಿ ಮಹಾಬೋಧಿ ಅಶೋಕ ಧಮ್ಮ ದೂತ ಬುದ್ಧ ಸೊಸೈಟಿಯಿಂದ ಸೋಮವಾರ ಬುದ್ಧ ಜಯಂತಿಯನ್ನು ಆಚರಣೆ ಮಾಡಲಾಯಿತು.
ಉಪಾಸಕ ಅರ್ಜುನ್ ವಿಶ್ವ ಶಾಂತಿಗಾಗಿ ಬುದ್ಧ ಧ್ವಜಾರೋಹಣ ಮಾಡಿದರು. ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಹಾಗೂ ಸ್ಥಾನಿಕ ಭಿಕ್ಕು ಖೇಮಿಂಡೋ ಬಂತೇಜಿ ನೇತೃತ್ವದಲ್ಲಿ ಬೋಧಿ ಪೂಜೆಯನ್ನು ನೆರವೇರಿಸಲಾಯಿತು. ಗಂಗಾಧರಯ್ಯ ಸ್ಮಾರಕ ಧ್ಯಾನ ಮಂದಿರದಲ್ಲಿ ಬುದ್ಧ ಪೂಜೆ ಮಾಡಲಾಯಿತು. ಉಪಾಸಕ ಮತ್ತು ಉಪಾಸಕಿಯರಿಗೆ ತಿಸರಣ, ಪಂಚಶೀಲ ಬೋಧಿಸಲಾಯಿತು. ನಂತರ ಧಮ್ಮೋಪದೇಶವನ್ನು ನೀಡಲಾಯಿತು. ಬೋಧಿ ವೃಕ್ತಕ್ಕೆ ನಮನ ಸಲ್ಲಿಸಲಾಯಿತು.
ಉಪಾಸಕರಾದ ಕೃಷ್ಣಕುಮಾರ್, ಪ್ರತಾಪ್, ಗೌತಮ್, ಪ್ರಭುರಾಮ್, ಪುರುಷೋತ್ತಮ, ಜಯಪ್ರಕಾಶ್, ಮದಿವಣ್ಣನ್ ,ಜಯಪ್ರಕಾಶಂ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.