ಬಂಗಾರಪೇಟೆ: ‘ಜನರ ಹಣವನ್ನು ಜನರ ಕೆಲಸಕ್ಕೇ ವಿನಿಯೋಗಿಸುವ ಮೂಲಕ ನಮ್ಮ ಸರ್ಕಾರ ಸಾಮಾಜಿಕ ಸಮಾನತೆಗಾಗಿ ಶ್ರಮಿಸುತ್ತಿದೆ’ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಂಗಳವಾರ ಆಯೋಜಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಸಾಧನೆಯ ಸಂಭ್ರಮ ಆಚರಣೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಜನಪರ, ಅಭಿವೃದ್ಧಿಪರ, ಬಡವರ ಪರ, ಮಹಿಳೆಯರ ಪರ ಕೆಲಸ ಮಾಡಿದೆ ಎಂದರು.
‘ಭೂ ಗ್ಯಾರಂಟಿ ಯೋಜನೆ ಮೂಲಕ ನಮ್ಮ ಸರ್ಕಾರ ಹೊಸ ಇತಿಹಾಸ ಬರೆದಿದೆ. ಎಲ್ಲ ಇಲಾಖೆಗಳಿಂದಲೂ ಜನರಿಗೆ ಕಾರ್ಯಕ್ರಮಗಳನ್ನು ಕೊಡುವಂತ ಕೆಲಸವನ್ನು ಮಾಡುತ್ತಿದೆ’ ಎಂದರು.
ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಮಾತನಾಡಿದರು. ಪಾರ್ಥಸಾರಥಿ, ಶಂಷುದ್ದೀನ್ ಬಾಬು, ಅಣ್ಣಾ ದೊರೈ, ಕುಂಬಾರ ಪಾಳ್ಯ ಮಂಜುನಾಥ್, ಅರುಣಾಚಲ ಮಣಿ, ಮಹಾದೇವ,ಬಿ ವಿ ಶಂಕರ್,ವಸಂತ್, ಆದಿ ನಾರಾಯಣ ಕುಟ್ಟಿ,ಮರವಹಳ್ಳಿ ಮಂಜುನಾಥ,ಹೆಚ್ ಕೆ ನಾರಾಯಣಸ್ವಾಮಿ,ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.