ADVERTISEMENT

ಕೋಲಾರ: ಜಡಿ ಮಳೆಗೆ ಬದುಕು ನೀರುಪಾಲು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 10:32 IST
Last Updated 12 ನವೆಂಬರ್ 2021, 10:32 IST

ಕೋಲಾರ: ಜಿಲ್ಲೆಯಲ್ಲಿ ಜಡಿ ಮಳೆ ಮುಂದುವರಿದಿದ್ದು. ಬುಧವಾರದಿಂದ ಸುರಿಯುತ್ತಿರುವ ಸತತ ಮಳೆಗೆ ರೈತರ ಬದುಕು ನೀರು ಪಾಲಾಗಿದೆ.

ಮಳೆಯ ಕಾರಣಕ್ಕೆ ವಾತಾವರಣದಲ್ಲಿ ತೇವಾಂಶ ಹೆಚ್ಚಳಗೊಂಡು ತೋಟಗಾರಿಕೆ ಬೆಳೆಗಳು ಮತ್ತು ಹಣ್ಣಿನ ಬೆಳೆಗಳಲ್ಲಿ ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ. ಹೂವು ಕಟಾವಿಗೆ ಸಮಸ್ಯೆಯಾಗಿದ್ದು, ಹೂವುಗಳು ಜಮೀನಿನಲ್ಲೇ ಕೊಳೆಯಲಾರಂಭಿಸಿವೆ.ತುಂತುರು ಮಳೆ, ಹೆಚ್ಚು ಆರ್ದ್ರತೆಯುಳ್ಳ ಹವಾಗುಣ ಮತ್ತು ಮೋಡ ಕವಿದ ವಾತಾವರಣದಿಂದ ಟೊಮೆಟೊ ಹಾಗೂ ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಬಿತ್ತನೆಯಾಗಿರುವ ಆಲೂಗಡ್ಡೆಗಳು ಮಣ್ಣಿನಲ್ಲೇ ಕರಗುತ್ತಿವೆ.

ಜಿಲ್ಲೆಯ 64,567 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆರಾಯ ಕಣ್ಣೀರು ತರಿಸಿದ್ದಾನೆ. ರಾಗಿ ಕೊಯ್ಲು ಆರಂಭದ ಸಂದರ್ಭದಲ್ಲೇ ಮಳೆ ಬಿಟ್ಟು ಬಿಡದೆ ಸುರಿಯುತ್ತಿದ್ದು, ರಾಗಿ ತೆನೆಗಳು ನೆಲಕ್ಕೆ ಬಾಗಿ ಜಮೀನಿನಲ್ಲೇ ಮೊಳಕೆಯೊಡೆಯಲಾರಂಭಿಸಿವೆ. ಜಮೀನುಗಳು ಕೆಸರು ಗದ್ದೆಯಂತಾಗಿದ್ದು, ಬೆಳೆ ನಷ್ಟದ ಸಮೀಕ್ಷೆಗೂ ಮಳೆರಾಯ ಬಿಡುವು ಕೊಟ್ಟಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.