ADVERTISEMENT

ಬೇತಮಂಗಲ: ಬಿರುಗಾಳಿ ಸಹಿತ ಗಾಳಿ ಮಳೆಗೆ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 4 ಮೇ 2025, 13:57 IST
Last Updated 4 ಮೇ 2025, 13:57 IST
ಬೇತಮಂಗಲ ವೆಂಕಟಾಪುರ ಗ್ರಾಮದ ರೈತ ಜಯರಾಮ್ ರೆಡ್ಡಿ ಅವರಿಗೆ ಸೇರಿದ ಹಾಗಲಕಾಯಿ ಬೆಳೆಯು ಮಳೆ ಗಾಳಿ ಮಳೆಗೆ ಸಂಪೂರ್ಣವಾಗಿ ನೆಲಕ್ಕೆ ಉರುಳಿ ಬಿದ್ದಿರುವುದು
ಬೇತಮಂಗಲ ವೆಂಕಟಾಪುರ ಗ್ರಾಮದ ರೈತ ಜಯರಾಮ್ ರೆಡ್ಡಿ ಅವರಿಗೆ ಸೇರಿದ ಹಾಗಲಕಾಯಿ ಬೆಳೆಯು ಮಳೆ ಗಾಳಿ ಮಳೆಗೆ ಸಂಪೂರ್ಣವಾಗಿ ನೆಲಕ್ಕೆ ಉರುಳಿ ಬಿದ್ದಿರುವುದು   

ಬೇತಮಂಗಲ: ಸತತ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಬಾರಿ ಬಿರುಗಾಳಿ ಸಹಿತ ಮಳೆಗೆ ಲಕ್ಷಾಂತರ ರೂಪಾಯಿ ರೈತರ ಬೆಳೆ ನೆಲಕ್ಕೆ ಉರುಳುವ ಮೂಲಕ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ರೈತ ಜಯರಾಮ್ ರೆಡ್ಡಿ ಅವರಿಗೆ ಸೇರಿದ ಸುಮಾರು 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಹಾಗಲಕಾಯಿ ಬೆಳೆ ಸಂಪೂರ್ಣ ನೆಲಕ್ಕೆ ಉರುಳಿದೆ.

4ಎಕರೆ ಜಮೀನಿನಲ್ಲಿ ಸುಮಾರು ₹5ಲಕ್ಷಕ್ಕೂ ಹೆಚ್ಚು ಬಂಡವಾಳ ಹೂಡಿಕೆ ಮಾಡಿ ಬೆಳೆದಿದ್ದ ಹಾಗಲಕಾಯಿ ಬೆಲೆ ಇನ್ನೇನು ಕಟಾವಿಗೆ ಬಂದಿದೆ. ಇನ್ನೇನು ಬೆಳೆಗೆ ಹೂಡಿಕೆ ಮಾಡಿದ್ದ ಬಂಡವಾಳ ಹಾಗೂ ಲಾಭ ಕೈ ಸೇರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ನಮಗೆ ಗಾಳಿ ಮಳೆಯು ಲಕ್ಷಾಂತರ ರೂಪಾಯಿ ಬೆಳೆ ನಷ್ಟ ಉಂಟು ಮಾಡಿದೆ ಎಂದು ರೈತ ಜಯರಾಮ್ ರೆಡ್ಡಿ ನೋವು ತೋಡಿಕೊಂಡರು.

ADVERTISEMENT

ಅಲ್ಲಿಕಲ್ಲು ಗಾಳಿ ಮಳೆಯಿಂದ ರೈತರಿಗೆ ನಷ್ಟವಾಗಿರುವ ಬಗ್ಗೆ ಈಗಾಗಲೇ ಅನೇಕ ರೈತರು ಗಮನಕ್ಕೆ ತಂದಿದ್ದಾರೆ. ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ವಿಶ್ವನಾಥ್‌ ತಿಳಿಸಿದ್ದಾರೆ.

ರೈತ ಜಯರಾಮ್ ರೆಡ್ಡಿ ಹಾಗಲಕಾಯಿ ಕೈಯಲ್ಲಿ ಹಿಡಿದು ನೋವು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.