ಮುಳಬಾಗಿಲು: ನಗರದ ಮೆಹಬೂಬ್ ನಗರದಲ್ಲಿ ಗುರುವಾರ ಬೆಳಿಗ್ಗೆ ಅಡುಗೆ ಅನಿಲ ಸಿಲಿಂಡರ್ ಸಿಡಿದು ತಾಯಿ ಮತ್ತು ಮಗು ತೀವ್ರವಾಗಿ ಗಾಯಗೊಂಡಿದ್ದು, ಮೂರು ಮನೆಗಳು ಜಖಂಗೊಂಡಿವೆ.
ನಾಗಮ್ಮ (46) ಹಾಗೂ ಅವರು ಸಾಕಿಕೊಂಡಿದ್ದ ತನುಷ್(4) ಗಾಯಗೊಂಡಿದ್ದು, ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗಮ್ಮ ಅವರ ಮನೆ ಸೇರಿದಂತೆ ಪಕ್ಕದ ಸಾಕಮ್ಮ ಮತ್ತು ಸುಹೇಲ್ ಅವರ ಮನೆಗಳು ಜಖಂಗೊಂಡಿವೆ. ಖಾದರ್ ಬಾಷಾ ಎಂಬುವರ ಮನೆ ಕಾಂಪೌಂಡ್ ಹಾಳಾಗಿದೆ. ಬುಧವಾರ ಸಂಜೆಯಷ್ಟೇ ಹೊಸ ಗ್ಯಾಸ್ ತರಿಸಿದ್ದರು ಎನ್ನಲಾಗಿದೆ. ಮನೆಯಲ್ಲಿ ಅವರಿಬ್ಬರೇ ವಾಸವಾಗಿದ್ದರು.
ತಹಶೀಲ್ದಾರ್ ಕೆ.ಎನ್. ರಾಜಶೇಖರ್ ಮತ್ತು ಕಂದಾಯ ನಿರೀಕ್ಷಕ ಸಾದತ್ ಉಲ್ಲಾಖಾನ್ ಭೇಟಿ ನೀಡಿ ಪರಿಶೀಲಿಸಿದರು. ಗಾಯಾಳುಗಳಿಗೆ ನೆರವು ನೀಡಲು ಗ್ಯಾಸ್ ಏಜೆನ್ಸಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.