ADVERTISEMENT

ಐವಾರಹಳ್ಳಿ: 2 ಎಕರೆ ಜಮೀನಿಗಾಗಿ ದಲಿತ ಕುಟುಂಬಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 15:40 IST
Last Updated 25 ಸೆಪ್ಟೆಂಬರ್ 2024, 15:40 IST
ಐವಾರಹಳ್ಳಿಯಲ್ಲಿ ಗುಡಿಸಲು ಹಾಕಿಕೊಂಡು ಹೋರಾಟ ನಡೆಸುತ್ತಿರುವ ದಲಿತ ಕುಟುಂಬ 
ಐವಾರಹಳ್ಳಿಯಲ್ಲಿ ಗುಡಿಸಲು ಹಾಕಿಕೊಂಡು ಹೋರಾಟ ನಡೆಸುತ್ತಿರುವ ದಲಿತ ಕುಟುಂಬ    

ಬೇತಮಂಗಲ: ತಾಲ್ಲೂಕಿನ ಐವಾರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ತಮ್ಮ ಕುಟುಂಬಕ್ಕೆ ಮಂಜೂರಾಗಿರುವ ಎರಡು ಎಕರೆ ಜಮೀನನ್ನು ಪ್ರಭಾವಿಗಳು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಕುಟುಂಬವೊಂದು, ಜಮೀನಿನಲ್ಲಿ ಗುಡಿಸಲು ನಿರ್ಮಿಸಿ, ಅಂಬೇಡ್ಕರ್ ಭಾವಚಿತ್ರದೊಂದಿಗೆ ಹೋರಾಟಕ್ಕೆ ಮುಂದಾಗಿದೆ. 

‘20 ವರ್ಷದ ಹಿಂದೆ ನಮ್ಮ ತಾತ ಮುನಿಯಪ್ಪ ಅವರಿಗೆ ಕೃಷ್ಣಪ್ಪ ನಾಯ್ಡು ಎಂಬುವರು ಈ ಜಾಗ ಮಂಜೂರು ಮಾಡಿಸಿಕೊಟ್ಟಿದ್ದರು. ಈ ನಡುವೆ ನಾವು ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಹೋಗಿದ್ದೆವು. ಆಗ ಕೃಷ್ಣಪ್ಪ ನಾಯ್ಡು ಅವರ ಕುಟುಂಬಸ್ಥರು ಈ ಜಮೀನು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ’ ಎಂದು ಕುಟುಂಬದ ರವಿ ಆರೋಪ ಮಾಡಿದರು.

ದಲಿತ ಸಮುದಾಯದ ಶ್ರೀನಾಥ್ ನಾಸ್ತಿಕ, ರಂಗನಾಥ್, ಮಂಜುನಾಥ್, ಚಂದ್ರಶೇಖರ್, ಸುಬ್ರಮಣಿ, ವೆಂಕಟರಾಮ್ ಈ ವೇಳೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.