ADVERTISEMENT

ಕೋಲಾರ: ತಾಲ್ಲೂಕು ನಿರ್ದೇಶಕರಾಗಿ ರಘುಪತಿ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 28 ಮೇ 2025, 16:08 IST
Last Updated 28 ಮೇ 2025, 16:08 IST
ಕೋಲಾರ ಡಿಸಿಸಿ ಬ್ಯಾಂಕಿಗೆ ಮುಳಬಾಗಿಲು ತಾಲ್ಲೂಕಿನಿಂದ ನೂತನ ನಿರ್ದೇಶಕರಾಗಿ ಆಯ್ಕೆಯಾದ ರಘುಪತಿ ರೆಡ್ಡಿ ಜೊತೆ ಶಾಸಕ ಸಮೃದ್ಧಿ ಮಂಜುನಾಥ್ ಹಾಗೂ ಮುಖಂಡರು ಇದ್ದಾರೆ
ಕೋಲಾರ ಡಿಸಿಸಿ ಬ್ಯಾಂಕಿಗೆ ಮುಳಬಾಗಿಲು ತಾಲ್ಲೂಕಿನಿಂದ ನೂತನ ನಿರ್ದೇಶಕರಾಗಿ ಆಯ್ಕೆಯಾದ ರಘುಪತಿ ರೆಡ್ಡಿ ಜೊತೆ ಶಾಸಕ ಸಮೃದ್ಧಿ ಮಂಜುನಾಥ್ ಹಾಗೂ ಮುಖಂಡರು ಇದ್ದಾರೆ   

ಮುಳಬಾಗಿಲು: ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ತಾಲ್ಲೂಕು ನಿರ್ದೇಶಕರಾಗಿ ರಘುಪತಿ ರೆಡ್ಡಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಂತರ ನಗರದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸಮೃದ್ಧಿ ಮಂಜುನಾಥ್, ಮುಳಬಾಗಿಲು ನಗರಸಭೆಯಲ್ಲಿ ಆಗಿದ್ದ ಸೋಲಿಗೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮುಯ್ಯಿ ತೀರಿಸಿಕೊಂಡಿದ್ದೇವೆ ಎಂದು ಹೇಳಿದರು.

ಈಗಾಗಲೇ ಕೋಮುಲ್ ಚುನಾವಣೆಯ ಪೂರ್ವಕ್ಕೆ ಕಾಡೇನಹಳ್ಳಿ ನಾಗರಾಜ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ಭಾನುವಾರ ನಗರದಲ್ಲಿ ಮುಖಂಡರ ಸಭೆ ಕರೆದು ಕೋಮುಲ್ ಪಶ್ಚಿಮ ಭಾಗದ ಅಭ್ಯರ್ಥಿಯನ್ನು ಘೋಷಿಸಲಾಗುವುದು ಎಂದು ಹೇಳಿದರು.

ADVERTISEMENT

ನೂತನ ನಿರ್ದೇಶಕ ರಘುಪತಿ ರೆಡ್ಡಿ ಮಾತನಾಡಿ, ‘ಎಲ್ಲಾ ಮುಖಂಡರ ನಂಬಿಕೆ ಹಾಗೂ ತಾಲ್ಲೂಕಿನ ಮಹಿಳೆಯರ ಋಣ ತೀರಿಸುವೆ‘ ಎಂದು ಹೇಳಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಶಿನಿಗೇನಹಳ್ಳಿ ಆನಂದ ರೆಡ್ಡಿ, ಬಿ.ಎಂ.ಸಿ ವೆಂಕಟರಾಮೇ ಗೌಡ, ಎಂ ಗೊಲ್ಲಹಳ್ಳಿ ಪ್ರಭಾಕರ್, ಎನ್ .ಆರ್.ಸತ್ಯ್ಯಣ್ಣ, ವರದರಾಜಪ್ಪ, ಭರತ್ ಆನಂದರೆಡ್ಡಿ, ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.