ADVERTISEMENT

ಸಾಕ್ಷಿ ನಾಶದಿಂದ ವೃತ್ತಿಗೌರವಕ್ಕೆ ಧಕ್ಕೆ

ಕ್ರೈಮ್ ಸೀನ್ ಅಂಡ್ ಸ್ಟ್ರೆಸ್ ಮ್ಯಾನೇಜ್‌ಮೆಂಟ್ ತರಬೇತಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 10:37 IST
Last Updated 18 ಜೂನ್ 2019, 10:37 IST
ಕೋಲಾರದಲ್ಲಿ ಪೊಲೀಸ್ ಇಲಾಖೆವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಎಮ್‌ಪವರಿಂಗ್ ಪೊಲೀಸ್ ಆಫೀಸರ್ಸ್- ಕ್ರೈಮ್ ಸೀನ್ ಅಂಡ್ ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಕುರಿತು ನಡೆದ ತರಬೇತಿಯಲ್ಲಿ ಬೆಂಗಳೂರಿನ ಎಡಿಜಿಪಿ ಪ್ರತಾಪ್ ರೆಡ್ಡಿ ಮಾತನಾಡಿದರು.
ಕೋಲಾರದಲ್ಲಿ ಪೊಲೀಸ್ ಇಲಾಖೆವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಎಮ್‌ಪವರಿಂಗ್ ಪೊಲೀಸ್ ಆಫೀಸರ್ಸ್- ಕ್ರೈಮ್ ಸೀನ್ ಅಂಡ್ ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಕುರಿತು ನಡೆದ ತರಬೇತಿಯಲ್ಲಿ ಬೆಂಗಳೂರಿನ ಎಡಿಜಿಪಿ ಪ್ರತಾಪ್ ರೆಡ್ಡಿ ಮಾತನಾಡಿದರು.   

ಕೋಲಾರ: ‘ಪೊಲೀಸ್ ಅಧಿಕಾರಿಗಳು ಯಾವುದೇ ಪ್ರಕರಣವನ್ನು ವೈಜ್ಞಾನಿಕವಾಗಿ ತನಿಖೆ ನಡೆಸಿದಾಗ ನೊಂದವರಿಗೆ ನ್ಯಾಯದೊರಕಿಸಲು ಸಾಧ್ಯ’ ಎಂದು ಬೆಂಗಳೂರಿನ ಎಡಿಜಿಪಿ ಪ್ರತಾಪ್ ರೆಡ್ಡಿ ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸು ವೈದ್ಯಕೀಯ ಕಾಲೇಜಿನಲ್ಲಿ ಪೊಲೀಸ್ ಇಲಾಖೆವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಎಮ್‌ಪವರಿಂಗ್ ಪೊಲೀಸ್ ಆಫೀಸರ್ಸ್- ಕ್ರೈಮ್ ಸೀನ್ ಅಂಡ್ ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಕುರಿತು ನಡೆದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

‘ಬಹುತೇಕ ಪ್ರಕರಣಗಳಲ್ಲಿ ಪ್ರಥಮ ತನಿಖೆಯಲ್ಲಿ ಸಿಬ್ಬಂದಿ ಅಥವಾ ಅಧಿಕಾರಿಗಳು ಲೋಪ ಎಸಗವುದಿಂದ ನೊಂದವರಿಗೆ ನ್ಯಾಯದೊರಕಿಸಲು ಸಾಧ್ಯವಾಗಿಲ್ಲ. ಎಚ್ಚರಿಕೆಯಿಂದ ಪಂಚನಾಮ ಮಾಡಿದರೆ ಪ್ರಕರಣದ ತನಿಖೆಯೂ ಸುಲಭವಾಗುತ್ತದೆ’ ಎಂದರು.

ADVERTISEMENT

‘ತನಿಖೆ ವೇಳೆ ಪೊಲೀಸರು ಯಾವುದೇ ಕಾರಣಕ್ಕೂ ನಿರ್ಲಕ್ಷ ತೋರಬಾರದು. ಸರಿಯಾದ ಸಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಪಂಚನಾಮ ವರದಿ ಸಲ್ಲಿಕೆಯ ಆಧಾರದ ಮೇಲೆ ನ್ಯಾಯಾಲಯ ವರದಿ ಕೇಳುತ್ತದೆ. ಸಾಕ್ಷಿಗಳನ್ನು ನಾಶಮಾಡಲು ಯತ್ನಿಸಿದರೆ ನಿರಾಪರಾಧಿಗೆ ಶಿಕ್ಷೆಯಾಗುತ್ತದೆ. ಇದು ತಮ್ಮ ವೃತ್ತಿಗೌರವಕ್ಕೂ ಧಕ್ಕೆ ಉಂಟು ಮಾಡುತ್ತದೆ’ ಎಂದು ಎಚ್ಚರಿಸಿದರು.

‘ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ತನಿಖೆ ನಡೆಸಿದ್ದರೂ ಹಲವು ಪ್ರಕರಣಗಳು ಉನ್ನತ ತನಿಖೆಗಾಗಿ ಸಿಬಿಐ, ಸಿಐಡಿಗೆ ಹೋಗುತ್ತದೆ. ಅವರು ಮೂರುನಾಲ್ಕು ವರ್ಷಗಳ ನಂತರ ಘಟನೆ ಸ್ಥಳಕ್ಕೆ ಭೇಟಿ ನೀಡಿದರೂ ಸಾಕ್ಷಿಗಳನ್ನು ಪತ್ತೆ ಹಚ್ಚುತ್ತಾರೆ. ಈ ಕೆಲಸ ಪೊಲೀಸರ ತನಿಖೆ ಹಂತದಲ್ಲಿ ನಡೆಯಬೇಕು’ ಎಂದು ಹೇಳಿದರು.

‘ಘಟನೆ ಸ್ಥಳವನ್ನು ಪಂಚನಾಮ ಮಾಡುವ ವೇಳೆ ತಪ್ಪು ಮಾಡಿದರೆ ತನಿಖೆ ಸಂದರ್ಭದಲ್ಲಿ ತೊಂದರೆಯಾಗುತ್ತದೆ. ಕ್ಲಿಷ್ಟಕರ ಪ್ರಕರಣಗಳ ತನಿಖೆಗೆ ನ್ಯಾಯ ವಿಜ್ಞಾನ ಮತ್ತು ತಜ್ಞರ (ಫರೋನಿಕ್ಸ್ ಸೈನ್ಸ್ ಅಂಡ್ ಟೆಕ್ನಾಲಜಿ ಎಕ್ಸ್ ಪೋರ್ಟ್‌ಸ್್) ಸಹಾಯ ಪಡೆದುಕೊಂಡರೆ ಪೊಲೀಸರಿಗೆ ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದರು.

‘ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುವುದರಿಂದ ವೃತ್ತಿಯಲ್ಲಿ ವಿಫಲತೆ ಕಾಣಲಾಗುತ್ತಿದೆ. ಇದರ ನಿರ್ಮೂಲನೆಗೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ’ ಎಂದು ಹೇಳಿದರು.

ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಎಚ್.ನಾಗರಾಜ್ ಮಾತನಾಡಿ, ‘ಸಮಾಜದಲ್ಲಿ ಪೊಲೀಸ್ ಕೆಲಸ ಮಹತ್ವವಾದುದು, ಪೊಲೀಸ್ ವ್ಯವಸ್ಥೆ ಇಲ್ಲದಿದ್ದರೆ ಸಮಾಜ ಏನಾಗುತ್ತಿತ್ತು ಎಂದು ಊಹಿಸಲಾಗುತ್ತಿರಲಿಲ್ಲ’ ಎಂದರು.

‘ಪೊಲೀಸರು ಒತ್ತಡದಿಂದ ಇಚ್ಚೆ ಬಂದು ಕೆಲಸ ಮಾಡಲು ಸರ್ಕಾರ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಾತನಾಡಿ, ‘ಯಾವುದೇ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಅಪರಾಧಿಗೆ ಶಿಕ್ಷೆಯಾಗದಿರಲು ಕಾರಣವೇನು ಎಂಬುದನ್ನು ಪೊಲೀಸರು ಅವಲೋಕನ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಘಟನೆಯ ಪ್ರಥಮ ತನಿಖೆಯಿಂದ ಹಿಡಿದು ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ತನಕ ನಿರ್ವಹಿಸಬೇಕಾದ ಕ್ರಮಗಳ ಬಗ್ಗೆ ತರಬೇತಿಯಲ್ಲಿ ಮಾಹಿತಿ ನೀಡಲಾಗುವುದು. ಪ್ರತಿಯೊಬ್ಬರು ಇದರ ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದು ಕೋರಿದರು.

ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಖಜಾಂಚಿ ರಾಜೇಂದ್ರ, ವೈದ್ಯಕೀಯ ಕಾಲೇಜಿನ ಕುಲಪತಿ ಡಾ.ಎಸ್.ಕುಮಾರ್, ಉಪ ಕುಲಪತಿ ಡಾ.ಜಿ.ಪ್ರದೀಪ್ ಕುಮಾರ್, ಪ್ರಾಂಶುಪಾ ಡಾ.ಪಿ.ಎನ್.ಶ್ರೀರಾಮುಲು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.