ಕೋಲಾರ: ತಾಲ್ಲೂಕಿನ ವೇಮಗಲ್ ಹೋಬಳಿಯ ವ್ಯಾಪ್ತಿಯಲ್ಲಿ ಸುಮಾರು ₹ 18 ಕೋಟಿ ವೆಚ್ಚದಲ್ಲಿ ಕಾಮಗಾರಿಗಳಿಗೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಪಟ್ಟಣದ ಮಡಿವಾಳ ಗೇಟ್‌ನಿಂದ ಸುಳದೇನಹಳ್ಳಿ ಮೂಲಕ ಹಾದುಹೋಗುವ ಕೊರಟಿ ಮಲ್ಲಂಡಹಳ್ಳಿ ಹೊಸಕೋಟೆ ಗಡಿವರೆಗೆ ಸುಮಾರು ₹ 3 ಕೋಟಿ ವೆಚ್ಚದಲ್ಲಿ ಡಾಂಬರ್ ರಸ್ತೆ, ಕ್ಯಾಲನೂರು ಕ್ರಾಸ್ (ವಿಶ್ವನಗರ) ಜಂಕ್ಷನ್ ಅಭಿವೃದ್ಧಿ ಕಾಮಗಾರಿಗೆ ₹ 1.4 ಕೋಟಿ, ಕುರುಗಲ್ ಗ್ರಾಮದ ಮುಖ್ಯ ರಸ್ತೆಗೆ ₹ 10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಕುರುಗಲ್ ಗ್ರಾಮದ ಕಾನೆ ಕಡೆಗೆ ಹೋಗುವ ರಸ್ತೆಗೆ ₹ 5 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಹೊಲೆರಹಳ್ಳಿ - ದಿನ್ನೂರು- ಪೇರ್ಜೆನಹಳ್ಳಿ ಕ್ರಾಸ್ ವರೆಗೆ ಸುಮಾರು ₹ 1.5 ಕೋಟಿ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಾಣ ಇದರಲ್ಲಿ ಸೇರಿದೆ.
ಅಲ್ಲದೇ, ಪುರಹಳ್ಳಿಯಿಂದದ ತೋಕಲಘಟ್ಟ ಗ್ರಾಮದ ವರೆಗೆ ₹ 75 ಲಕ್ಷ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಾಣ, ವೇಮಗಲ್‌ನಿಂದ ಸೀತಿವರೆಗೆ ಸುಮಾರು ₹ 8 ಕೋಟಿ ರೂ ವೆಚ್ಚದಲ್ಲಿ ಡಬಲ್ ರಸ್ತೆ ನಿರ್ಮಾಣ, ಚೌಡದೇನಹಳ್ಳಿ - ಕಲ್ವಮಂಜಲಿ - ವೇಮಗಲ್ ವರೆಗೆ ₹ 2.5 ಕೋಟಿ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿ ಇದರಲ್ಲಿವೆ.
ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ನಿಧಿಯಿಂದ ಎರಡು ಆಟೋ ಮತ್ತು ಪಿಟ್ ತೆಗೆಯುವ ಮೆಷಿನ್‌ಗೆ ಪೌರಕಾರ್ಮಿಕರ ಕೈಯಲ್ಲಿ ಪೂಜೆ ಮಾಡಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಶಾಸಕರು, ‘ಕಾಂಗ್ರೆಸ್ ಸರ್ಕಾರ ಸದಾ ಅಭಿವೃದ್ಧಿ ಪರವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಹಳ್ಳಿಯಿಂದ ರಾಷ್ಟ್ರದ ಅಭಿವೃದ್ಧಿಗೆ ಬದ್ಧವಾಗಿರುವ ಏಕೈಕ ಪಕ್ಷ ನಮ್ಮದು. ಸುಸಜ್ಜಿತ ಭಾರತಕ್ಕೆ ಅಡಿಪಾಯ ಹಾಕಿದ್ದೆ ಕಾಂಗ್ರೆಸ್ ಸರ್ಕಾರ, ಗ್ರಾಮೀಣ ಭಾಗದ ಜನತೆ ಸುಗಮವಾಗಿ ಸಂಚರಿಸಲು ಅನುಕೂಲವಾಗಲು ರಸ್ತೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ’ ಎಂದರು.
‘ಪಟ್ಟಣ ಪಂಚಾಯತಿ ವ್ಯಾಪ್ತಿಗೆ ₹ 60 ಕೋಟಿ ಕೆಲಸಗಳು ಬಾಕಿ ಇವೆ. ಅವೆಲ್ಲವೂ ಟೆಂಡರ್ ಪ್ರಕ್ರಿಯೆಯಲ್ಲಿವೆ. ಚುನಾವಣೆ ಮುಗಿದ ನಂತರ ಹಂತ ಹಂತವಾಗಿ ಕಾರ್ಯರೂಪಕ್ಕೆ ತರುತ್ತೇವೆ’ ಎಂದು ಹೇಳಿದರು.
‘ವೇಮಗಲ್ –ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಎಕರೆ ಜಾಗದಲ್ಲಿ ಕಸ ವಿಲೇವಾರಿ ಘಟಕ ಹಾಗೂ ಎಸ್‌ಟಿಪಿ ಪ್ಲಾಂಟ್ ಅಭಿವೃದ್ಧಿ ಪಡಿಸಲಾಗುವುದು. ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ಒತ್ತು ನೀಡಿದ್ದು, ಪಟ್ಟಣ ಪಂಚಾಯಿತಿ ಯೋಜನಾ ಪ್ರಾಧಿಕಾರಕ್ಕೆ ಉತ್ತಮ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿ, ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿದರು.
ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶಿವಕುಮಾರ್, ಮುಖಂಡರಾದ ನಾಗನಾಳ ಸೋಮಣ್ಣ, ಉರಟ ಅಗ್ರಹಾರ ಚೌಡರೆಡ್ಡಿ, ಮೈಲಾಂಡಹಳ್ಳಿ ಮುರಳಿ, ಮುನಿಯಪ್ಪ, ಶೈಲಜಾ ಪಿ ವೆಂಕಟೇಶ್, ಕುಮಾರ್, ಮಂಜುನಾಥ್, ಶಶಿಕಲಾ ನವೀನ್, ಕಡಗಟ್ಟೂರು ದೇವರಾಜ್, ಪೇರ್ಜೆನಹಳ್ಳಿ ನಾಗೇಶ್, ಮೇಡಿಹಾಳ ಮುನಿಆಂಜಿನಪ್ಪ, ಕುರುಗಲ್ ಚೌಡೇಗೌಡ, ವಕೀಲ ವೆಂಕಟೇಶ್ ಗೌಡ, ಈಡಿಗರ ಚಂದ್ರು, ಬೈರಂಡಹಳ್ಳಿ ನಾಗೇಶ್, ಪ.ಪಂ ಮುಖ್ಯಾಧಿಕಾರಿ ವೆಂಕಟೇಶ್, ಬೆಟ್ಟಹೊಸಪುರ ಜಗನ್, ಕೌಶಿಕ್, ಬೀಮಣ್ಣನವರ ಮಂಜುನಾಥ್, ದೀಪಾ ವೆಂಕಟೇಶ್, ಲಕ್ಷ್ಮೀ ವೆಂಕಟೇಶ್, ವನಿತಾ, ಸುಮಾ, ವರಲಕ್ಷ್ಮೀ, ಚಂದ್ರಕಲಾ, ಅನಿತಾ, ಸುಪ್ರಿಯ, ಭಾರತಿ, ವನಜಾ ಇದ್ದರು.
ನಾನು ಕೊಟ್ಟ ಮಾತಿನಂತೆ ಕೆಲಸ ಮಾಡಿ ತೋರಿಸುವ ವ್ಯಕ್ತಿ. ಎಲ್ಲಾ ಕಾಮಗಾರಿಗಳನ್ನು ನನ್ನ ಅವಧಿಯಲ್ಲಿ ಪರಿಶೀಲಿಸಿ ಪಟ್ಟಿಯಲ್ಲಿ ಸೇರಿಸಿ ಟೆಂಡರ್ ಮುಖಾಂತರ ಕಾರ್ಯರೂಪಕ್ಕೆ ತಂದಿದ್ದೇನೆ–ಕೊತ್ತೂರು ಮಂಜುನಾಥ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.