ADVERTISEMENT

ವೇಮಗಲ್ ನಲ್ಲಿ ಅಂಬೇಡ್ಕರ್ ಜಯಂತಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 15:04 IST
Last Updated 27 ಏಪ್ರಿಲ್ 2025, 15:04 IST
ವೇಮಗಲ್‌ನಲ್ಲಿ ಭಾನುವಾರ ಬಿ.ಆರ್ ಅಂಬೇಡ್ಕರ್ ಜಯಂತಿ ನಡೆಯಿತು
ವೇಮಗಲ್‌ನಲ್ಲಿ ಭಾನುವಾರ ಬಿ.ಆರ್ ಅಂಬೇಡ್ಕರ್ ಜಯಂತಿ ನಡೆಯಿತು   

ವೇಮಗಲ್: ಶಿಕ್ಷಣ ಮತ್ತು ಸಬಲೀಕರಣದಿಂದ ಅಸಮಾನತೆ ಹೋಗಲಾಡಿಸಬಹುದಾಗಿದೆ. ಅಂಬೇಡ್ಕರ್ ಆಶಯವೂ ಇದೇ ಆಗಿತ್ತು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ವೆಂಕಟೇಶ್ (ವಿನಯ್) ತಿಳಿಸಿದರು.

ವೇಮಗಲ್‌ನಲ್ಲಿ ಭಾನುವಾರ ಅಂಬೇಡ್ಕರ್ ಜಯಂತಿ ಮೆರವಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರಿಗೆ ಸ್ವಾತಂತ್ರ್ಯ,ಸಮಾನತೆ ಹಕ್ಕು ಕಲ್ಪಿಸಲು ಅಂಬೇಡ್ಕರ್‌ ಶ್ರಮಿಸಿದ್ದಾರೆ.  ಜಗತ್ತಿನ ಶ್ರೇಷ್ಠ ಜ್ಞಾನಿಯಾಗಿದ್ದ ಅಂಬೇಡ್ಕರ್‌ ತಮ್ಮ ಪ್ರತಿಭೆಯನ್ನು ಮನುಕುಲದ ಉದ್ಧಾರಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರ ಆದರ್ಶ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮುಖಂಡರಾದ ಸೀತಾರಾಮಪ್ಪ, ಯುವ ಮುಖಂಡರಾದ ಪ್ರವೀಣ್,ಸಂದೀಪ್, ಜೈಭೀಮ್ ಸುವಾಸ್, ಮಹಿಂದ್ರ, ಮನೋಜ್, ಸುವಾಸ್ ಇದ್ದರು.

ADVERTISEMENT
ವೇಮಗಲ್ ನಲ್ಲಿ ಭಾನುವಾರ ನಡೆದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರಥಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ವೆಂಕಟೇಶ್ ( ವಿನಯ್) ಅವರು ಚಾಲನೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.