ADVERTISEMENT

ಮುಳಬಾಗಿಲು | ಆಲಂಗೂರು ಪ್ರತಿಮೆ ನಿರ್ಮಾಣ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 15:13 IST
Last Updated 3 ಆಗಸ್ಟ್ 2024, 15:13 IST
ಮುಳಬಾಗಿಲು ನಗರದ ತಾತಿಪಾಳ್ಯ ವೃತ್ತದಲ್ಲಿ ನಿರ್ಮಾಣ ಮಾಡಲಾಗಿರುವ ಆಲಂಗೂರು ಶ್ರೀನಿವಾಸ್ ಪ್ರತಿಮೆಗೆ ತಾಲ್ಲೂಕು ಆಡಳಿತ ಮುಸುಕು ಹಾಕಿರುವುದು
ಮುಳಬಾಗಿಲು ನಗರದ ತಾತಿಪಾಳ್ಯ ವೃತ್ತದಲ್ಲಿ ನಿರ್ಮಾಣ ಮಾಡಲಾಗಿರುವ ಆಲಂಗೂರು ಶ್ರೀನಿವಾಸ್ ಪ್ರತಿಮೆಗೆ ತಾಲ್ಲೂಕು ಆಡಳಿತ ಮುಸುಕು ಹಾಕಿರುವುದು   

ಮುಳಬಾಗಿಲು: ನಗರದ ತಾತಿಪಾಳ್ಯ ವೃತ್ತದಲ್ಲಿ ಆಲಂಗೂರು ಶ್ರೀನಿವಾಸ್ ಪ್ರತಿಮೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯ ಹೈಕೋರ್ಟ್‌ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಭೇಟಿ ನೀಡಿ  ಪರಿಶೀಲಿಸಿದರು.

ನಾಡಪ್ರಭು ಕೆಂಪೇಗೌಡರ ಅಶ್ವರೂಢ ಪ್ರತಿಮೆ ಹಾಗೂ ಹಿಂದೆ ತಾಲ್ಲೂಕು ಒಕ್ಕಲಿಗರ ಸಂಘದಿಂದ ಪ್ರತಿಷ್ಠಾಪನೆ ಮಾಡಲು ನಿಲ್ಲಿಸಿರುವ ಕ್ಷೇತ್ರದ ಮಾಜಿ ಶಾಸಕ, ಸಚಿವ ದಿವಂಗತ ಆಲಂಗೂರು ಶ್ರೀನಿವಾಸ್ ಅವರ ಪುತ್ಥಳಿ ಸ್ಥಳವನ್ನು ಪರಿಶೀಲನೆ ನಡೆಸಿ ಮಾಹಿತಿ ಪಡೆದರು.

ಪಾದಚಾರಿ ಮಾರ್ಗದಲ್ಲಿ ಆಲಂಗೂರು ಶ್ರೀನಿವಾಸ್ ಪುತ್ಥಳಿ ನಿರ್ಮಾಣ ಮಾಡಿದರೆ ತೊಂದರೆ ಆಗಲಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಈಚೆಗೆ ಮುಳಬಾಗಿಲು ತಾಲ್ಲೂಕು ನಾಗರಿಕರ ವೇದಿಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಕೋಲಾರ ಜಿಲ್ಲಾ ಆಡಳಿತಕ್ಕೆ ನೋಟಿಸ್ ಜಾರಿ ಮಾಡಿದೆ‌.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.