ADVERTISEMENT

ಶಿಬಿರಕ್ಕೆ ತೆರಳಿದ ಜಿಲ್ಲೆ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 16:39 IST
Last Updated 26 ಡಿಸೆಂಬರ್ 2019, 16:39 IST
ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ 28ನೇ ರಾಜ್ಯ ಮಟ್ಟದ ಜಾಂಬೋ ರೆಟ್‌ ಶಿಬಿರಕ್ಕೆ ಜಿಲ್ಲೆಯ ವಿದ್ಯಾರ್ಥಿಗಳು ಕೋಲಾರದಿಂದ ಗುರುವಾರ ಪ್ರಯಾಣ ಬೆಳೆಸಿದರು.
ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ 28ನೇ ರಾಜ್ಯ ಮಟ್ಟದ ಜಾಂಬೋ ರೆಟ್‌ ಶಿಬಿರಕ್ಕೆ ಜಿಲ್ಲೆಯ ವಿದ್ಯಾರ್ಥಿಗಳು ಕೋಲಾರದಿಂದ ಗುರುವಾರ ಪ್ರಯಾಣ ಬೆಳೆಸಿದರು.   

ಕೋಲಾರ: ದೊಡ್ಡಬಳ್ಳಾಪುರದ ಆನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಶುಕ್ರವಾರ (ಡಿ.27) ನಡೆಯಲಿರುವ 28ನೇ ರಾಜ್ಯ ಮಟ್ಟದ ಜಾಂಬೋ ರೆಟ್‌ ಶಿಬಿರಕ್ಕೆ ಜಿಲ್ಲೆಯಿಂದ 200 ವಿದ್ಯಾರ್ಥಿಗಳು ತೆರಳಿದರು.

‘ಜಾಂಬೋ ರೆಟ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುತ್ತಾರೆ. ಜಿಲ್ಲೆಯ ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸಿ ಕೀರ್ತಿ ಹೆಚ್ಚಿಸಬೇಕು’ ಎಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಆರ್.ಮಧು ಕಿವಿಮಾತು ಹೇಳಿದರು.

‘ಡಿ.27ರಿಂದ 2020ರ ಜ.2ರವರೆಗೆ ಜಾಂಬೋ ರೆಟ್‌ ಶಿಬಿರ ನಡೆಯುತ್ತದೆ. ದೇಶದಲ್ಲಿ ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಪ್ರಥಮ ಸ್ಥಾನ ಪಡೆದು 7 ಬಹುಮಾನ ಗಳಿಸಿದೆ. ಜತೆಗೆ ಕೋಲಾರ ಜಿಲ್ಲೆಗೂ ಬಹುಮಾನ ಲಭಿಸಿದೆ. ಈ ಬಾರಿ ಸಂಸ್ಥೆಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಪ್ರಶಸ್ತಿ ಗಳಿಸಬೇಕು’ ಎಂದು ಆಶಿಸಿದರು.

ADVERTISEMENT

‘ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ತಮ ನಡವಳಿಕೆ ತೋರಬೇಕು. ವಿವಿಧ ಜಿಲ್ಲೆಗಳಿಂದ ಬಂದಿರುವ ಶಿಬಿರಾರ್ಥಿಗಳಿಗೆ ಉಳಿದುಕೊಳ್ಳಲು ಪ್ರತ್ಯೇಕ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಆಯೋಜಕರು ನಿಗದಿಪಡಿಸಿದ ಟೆಂಟ್‌ನಲ್ಲೇ ವಿದ್ಯಾರ್ಥಿಗಳು ಉಳಿದುಕೊಳ್ಳಬೇಕು. ಚಳಿ ಪ್ರಮಾಣ ಹೆಚ್ಚಿರುವುದರಿಂದ ಆರೋಗ್ಯದ ಕಡೆ ಗಮನಹರಿಸಿ’ ಎಂದು ಸಲಹೆ ನೀಡಿದರು.

ಶಿಕ್ಷಕರಾದ ರೇಷ್ಮಾ ಖಾನಂ, ಅರುಣಾ, ವಿಜಯ್‌ಕುಮಾರ್, ವೆಂಕಟೇಗೌಡ, ಸುಮಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.