ADVERTISEMENT

ದುಡಿಯೋಣ ಬಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 4:06 IST
Last Updated 31 ಮಾರ್ಚ್ 2022, 4:06 IST
ಟೇಕಲ್‍ ಹೋಬಳಿಯ ಬನಹಳ್ಳಿ ಗ್ರಾ.ಪಂ.ನಲ್ಲಿ ನರೇಗಾ ಯೋಜನೆಯಡಿ ದುಡಿಯೋಣ ಬಾ ಕಾರ್ಯಕ್ರಮಕ್ಕೆ ಯೋಜನಾ ನಿರ್ದೇಶಕಿ ಶ್ರುತಿ ಚಾಲನೆ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ಪದ್ಮಾ ಮುನಿರಾಜು, ಪಿಡಿಒ ಅಮರೇಶ್‍ ಬಾಬು ಇದ್ದರು
ಟೇಕಲ್‍ ಹೋಬಳಿಯ ಬನಹಳ್ಳಿ ಗ್ರಾ.ಪಂ.ನಲ್ಲಿ ನರೇಗಾ ಯೋಜನೆಯಡಿ ದುಡಿಯೋಣ ಬಾ ಕಾರ್ಯಕ್ರಮಕ್ಕೆ ಯೋಜನಾ ನಿರ್ದೇಶಕಿ ಶ್ರುತಿ ಚಾಲನೆ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ಪದ್ಮಾ ಮುನಿರಾಜು, ಪಿಡಿಒ ಅಮರೇಶ್‍ ಬಾಬು ಇದ್ದರು   

ಟೇಕಲ್: ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡರೆ ಗ್ರಾಮಗಳಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಯೋಜನಾ ನಿರ್ದೇಶಕಿ ಡಿ.ಸಿ. ಶ್ರುತಿ ಹೇಳಿದರು.

ಹೋಬಳಿಯ ಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ದುಡಿಯೋಣ ಬಾ ಅಭಿಯಾನದ ಆಟೊ ಪ್ರಚಾರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ನರೇಗಾ ಕೂಲಿಯನ್ನು ₹ 309ಕ್ಕೆ ಏರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಉದ್ಯೋಗ ನೀಡುವುದರಲ್ಲಿ ನರೇಗಾ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಬೇಸಿಗೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಸರ್ಕಾರ ದುಡಿಯೋಣ ಅಭಿಯಾನ ಆರಂಭಿಸಿದೆ. ಕೂಲಿ ಕಾರ್ಮಿಕರಿಗೆ ಹೊಸ ಜಾಬ್ ಕಾರ್ಡ್ ವಿತರಣೆ ಹಾಗೂ ಉದ್ಯೋಗ ನೀಡಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ADVERTISEMENT

ನರೇಗಾದಡಿ ಬನಹಳ್ಳಿ ಹಾಗೂ ನೂಟವೆ ಗ್ರಾಮ ಪಂಚಾಯಿತಿಯಲ್ಲಿ ಕೈಗೊಳ್ಳಲಾದ ಅಂಗನವಾಡಿಗಳು, ಶೌಚಾಲಯ, ಗ್ರಾಮೀಣ ಉದ್ಯಾನ, ಶಾಲೆ ಸಂಬಂಧಿಸಿದ ಕಾಮಗಾರಿಗಳನ್ನು ಪರಿಶೀಲಿಸಿದರು.

ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವಿ. ಕೃಷ್ಣಪ್ಪ, ಸಹಾಯಕ ನಿರ್ದೇಶಕ ರಾಘವೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಐಇಸಿ ಸಂಯೋಜಕ ಆನಂದ್ ಸಿ. ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.