ADVERTISEMENT

ಕೋಲಾರದಲ್ಲಿ ಭೂಕಂಪನದ ಅನುಭವ: ಗೋಡೆ ಬಿರುಕು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 13:21 IST
Last Updated 25 ಏಪ್ರಿಲ್ 2019, 13:21 IST
ಕೋಲಾರ ನಗರದ ಟಮಕದಲ್ಲಿ ಗುರುವಾರ ಭೂಮಿ ಕಂಪಿಸಿದ್ದು ತೋಟಗಾರಿಕಾ ಮಹಾವಿದ್ಯಾಲಯದ ಕಚೇರಿಯ ಗೋಡೆ ಬಿರುಕು ಬಿಟ್ಟಿದೆ.
ಕೋಲಾರ ನಗರದ ಟಮಕದಲ್ಲಿ ಗುರುವಾರ ಭೂಮಿ ಕಂಪಿಸಿದ್ದು ತೋಟಗಾರಿಕಾ ಮಹಾವಿದ್ಯಾಲಯದ ಕಚೇರಿಯ ಗೋಡೆ ಬಿರುಕು ಬಿಟ್ಟಿದೆ.   

ಕೋಲಾರ: ನಗರದ ಹೊರವಲಯದ ಟಮಕದಲ್ಲಿ ಗುರುವಾರ ಭೂಕಂಪನದ ಅನುಭವವಾಗಿದ್ದು, 5 ಸೆಕೆಂಡ್‌ಗಳ ಕಾಲ ಬಾಗಿಲು, ಕಿಟಕಿ ಸೇರಿದಂತೆ ಕಟ್ಟಡ ಅಲುಗಾಡಿದ ಅನುಭವವಾಗಿದೆ.

ಟಮಕ ಸಮೀಪದ ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಭೂಕಂಪನದ ಅನುಭವವಾಗಿದ್ದು, ಕಟ್ಟಡ, ಬಾಗಿಲು, ಕಿಟಕಿ ಅಲುಗಾಡಿದ ಅನುಭವವಾಗಿದೆ ಎನ್ನಲಾಗಿದೆ.

‘ಭೂ ಕಂಪನದ ಸಂದರ್ಭದಲ್ಲಿ ಮಹಾವಿದ್ಯಾಲಯದ ಡೀನ್ ಕಚೇರಿಯಲ್ಲಿ ಗೋಡೆ ಬಿರುಕು ಬಿಟ್ಟಿದ್ದು, ಯಾವುದೇ ತೊಂದರೆಯಾಗಿಲ್ಲ’ ಎಂದು ಡೀನ್ ಬಿ.ಜಿ.ಪ್ರಕಾಶ್ ತಿಳಿಸಿದ್ದಾರೆ.

ADVERTISEMENT

‘ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಜೆಯಲ್ಲಿದ್ದು, ಕಚೇರಿಯಲ್ಲಿದ್ದ ಸಿಬ್ಬಂದಿ ಈ ಕಂಪನದ ಅನುಭವದಿಂದ ಕೆಲ ಕಾಲ ಅತಂಕಕ್ಕೀಡಾಗಿದ್ದರು. ಸುಮಾರು ದಿನಗಳಿಂದ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಕಾರಣ ತಾಪಮಾನ ಹೆಚ್ಚಾಗಿ ಭೂಕಂಪನವಾಗಿದ್ದು, ಸ್ಥಳೀಯರಲ್ಲಿ ಅಂತಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.