ADVERTISEMENT

ಹೆದ್ದಾರಿಯ ಸಮಸ್ಯೆ ಪರಿಹಾರಕ್ಕೆ ರೈತ ಸಂಘ ಒತ್ತಾಯ

ಟೋಲ್‌ ಸಂಗ್ರಹ ಸ್ಥಗಿತ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 13:59 IST
Last Updated 6 ಸೆಪ್ಟೆಂಬರ್ 2024, 13:59 IST
ರಾಷ್ಟ್ರೀಯ ಹೆದ್ದಾರಿ–75ರ ಸಮಸ್ಯೆ ಪರಿಹಾರ ಮಾಡಲು ಕೋರಿ ರೈತ ಸಂಘದಿಂದ ಮುಳಬಾಗಿಲು ತಾಲ್ಲೂಕಿನ ದೇವರಾಯ ಸಮುದ್ರ ಬಳಿಯ ಲ್ಯಾಂಕೋ ಅಧಿಕಾರಿಗಳಿಗೆ ಮನ ನೀಡಿದರು
ರಾಷ್ಟ್ರೀಯ ಹೆದ್ದಾರಿ–75ರ ಸಮಸ್ಯೆ ಪರಿಹಾರ ಮಾಡಲು ಕೋರಿ ರೈತ ಸಂಘದಿಂದ ಮುಳಬಾಗಿಲು ತಾಲ್ಲೂಕಿನ ದೇವರಾಯ ಸಮುದ್ರ ಬಳಿಯ ಲ್ಯಾಂಕೋ ಅಧಿಕಾರಿಗಳಿಗೆ ಮನ ನೀಡಿದರು   

ಮುಳಬಾಗಿಲು: ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ-75ರ ಅವ್ಯವಸ್ಥೆ ಸರಿಪಡಿಸುವವರೆಗೂ ಟೋಲ್ ಸಂಗ್ರಹ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಶುಕ್ರವಾರ ರೈತ ಸಂಘದಿಂದ ಲ್ಯಾಂಕೋ ಸಿಬ್ಬಂದಿಗೆ ಮನವಿ ನೀಡಿದರು.

ಹೆದ್ದಾರಿ ಹದಗೆಟ್ಟಿರುವುದರಿಂದ ಇಲ್ಲಿನ ಸಂಚಾರ ಸಂಚಾಕಾರ ತರುತ್ತಿದೆ. ಇಲ್ಲಿ ವಾಹನ ಸವಾರರು ಅಪಘಾತವಾಗಿ ಕೈಕಾಲು ಮುರಿದುಕೊಂಡಿದ್ದಾರೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಹೆದ್ದಾರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ವಿಫಲವಾಗಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.

ಒಂದು ವಾರದೊಳಗೆ ಸಮಸ್ಯೆಯನ್ನು ಬಗೆಹರಿಸದಿದ್ದರೆ ಸೆ.17ರಂದು ಹೆದ್ದಾರಿಯಲ್ಲಿನ ಎಲ್ಲಾ ಟೋಲ್ ಬೂತ್‌ಗಳಲ್ಲಿ ಕೋಳಿ ಕಟ್ಟಿಹಾಕುವ ಮೂಲಕ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ADVERTISEMENT

ರಾಮಸಂದ್ರ ಗಡಿಭಾಗದಿಂದ ಮುಳಬಾಗಿಲು ಬೈಪಾಸ್ ವರೆಗಿನ ಹೆದ್ದಾರಿ ಮಳೆ ಬಂದರೆ ಕೆರೆ ಕುಂಟೆಗಳಾಗಿ ಮಾರ್ಪಡುತ್ತದೆ. ಬೇಸಿಗೆಯಲ್ಲಿ ಗುಂಡಿಯಿಂದ ಕೂಡಿರುವ ರಸ್ತೆಯಲ್ಲಿರುವ ಸಂಚರಿಸುವುದೇ ವಾಹನ ಸವಾರರಿಗೆ ಸವಾಲಾಗಿದೆ. ಹೀಗಾಗಿ ಕೂಡಲೇ ಸಮಸ್ಯೆ ಬಗೆಹರಿಸಲು ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಬಂಗವಾದಿ ನಾಗರಾಜಗೌಡ, ಮರಗಲ್ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಯಲುವಳ್ಳಿಪ್ರಬಾಕರ್, ಪಾರುಕ್‌ಪಾಷ್, ರಾಜೇಶ್, ವಿಜಯ್‌ಪಾಲ್, ಬಂಗಾರಿ ಮಂಜು, ಸುಪ್ರಿಂ ಚಲ, ಶಶಿ, ಮುನಿರಾಜು, ಗಿರೀಶ್, ತಿಮ್ಮಣ್ಣ, ಗೌರಮ್ಮ, ಶೈಲಜ, ರತ್ನಮ್ಮ, ಶೃತಿ, ವೆಂಕಟಮ್ಮ, ರತ್ನಮ್ಮ, ಮುನಿರತ್ನಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.