ADVERTISEMENT

ಮತ್ಸ್ಯದರ್ಶಿನಿ ಮಳಿಗೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 20:24 IST
Last Updated 10 ಸೆಪ್ಟೆಂಬರ್ 2019, 20:24 IST
ಕೋಲಾರದ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಮತ್ಸ್ಯದರ್ಶಿನಿ ಮೀನು ಊಟದ ಮಳಿಗೆ ಮಂಗಳವಾರ ಪುನರಾರಂಭವಾಗಿದ್ದು, ಮಾಜಿ ಸಚಿವ ವರ್ತೂರು ಪ್ರಕಾಶ್ ಮಳಿಗೆ ಗುತ್ತಿಗೆದಾರರಿಗೆ ಶುಭ ಕೋರಿದರು.
ಕೋಲಾರದ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಮತ್ಸ್ಯದರ್ಶಿನಿ ಮೀನು ಊಟದ ಮಳಿಗೆ ಮಂಗಳವಾರ ಪುನರಾರಂಭವಾಗಿದ್ದು, ಮಾಜಿ ಸಚಿವ ವರ್ತೂರು ಪ್ರಕಾಶ್ ಮಳಿಗೆ ಗುತ್ತಿಗೆದಾರರಿಗೆ ಶುಭ ಕೋರಿದರು.   

ಕೋಲಾರ: ಹಲವು ತಿಂಗಳಿಂದ ಮುಚ್ಚಿದ್ದ ಇಲ್ಲಿನ ಮತ್ಸ್ಯದರ್ಶಿನಿ ಮೀನು ಊಟದ ಮಳಿಗೆಯು ಮಂಗಳವಾರ ಪುನರಾರಂಭವಾಯಿತು.

ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಈ ಮಳಿಗೆಯನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ನಿರ್ವಹಣೆ ಮಾಡುತ್ತಿದ್ದು, ಕೆಲ ತಿಂಗಳುಗಳಿಂದ ಮಳಿಗೆಯಲ್ಲಿ ವಹಿವಾಟು ಸ್ಥಗಿತಗೊಳಿಸಲಾಗಿತ್ತು.

ನಗರದ ಕುರುಬರಪೇಟೆಯ ಅಪ್ಪಿ ಮತ್ತು ಬಬ್ಲು ಎಂಬುವರು ಮತ್ಸ್ಯದರ್ಶಿನಿ ಮಳಿಗೆ ನಿರ್ವಹಣೆಯ ಟೆಂಡರ್ ಪಡೆದು ವಹಿವಾಟು ಪುನರಾರಂಭಿಸಿದರು. ಮಾಜಿ ಸಚಿವ ವರ್ತೂರು ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎಸ್.ವೆಂಕಟೇಶ್, ಅರುಣ್‌ಪ್ರಸಾದ್ ನೂತನ ಗುತ್ತಿಗೆದಾರರಿಗೆ ಶುಭ ಕೋರಿದರು. ಮೊದಲ ದಿನವೇ ಗ್ರಾಹಕರು ಮಳಿಗೆಗೆ ಮುಗಿಬಿದ್ದರು.

ADVERTISEMENT

‘ನಗರದ ಜನತೆಗೆ ಶುದ್ಧವಾದ ರುಚಿ ಮೀನಿನ ಊಟ ಮತ್ತು ಮೀನಿನ ಮಾಡಿದ 24ಕ್ಕೂ ಹೆಚ್ಚು ಖಾದ್ಯಗಳನ್ನು ನಿತ್ಯವೂ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ. ಊಟ ದರ ದುಬಾರಿಯಲ್ಲ’ ಎಂದು ಮಳಿಗೆ ಗುತ್ತಿಗೆದಾರ ಅಪ್ಪಿ ತಿಳಿಸಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮುನಿಯಪ್ಪ, ನಗರಸಭೆ ಮಾಜಿ ಸದಸ್ಯರಾದ ಸೋಮಶೇಖರ್, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.