ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಪೋಲಿಸ್ ಠಾಣೆಯಲ್ಲಿ ಕಳವು ಪ್ರಕರಣದಲ್ಲಿ ಮಾಲಿನೊಂದಿಗೆ ಪೋಲಿಸರು
ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಪೊಲೀಸರು ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಕಳವು ಪ್ರಕರಣಗಳಲ್ಲಿ ಶನಿವಾರ ನಾಲ್ವರು ಅಂತರರಾಜ್ಯ ಕಳ್ಳರನ್ನು ಬಂಧಿಸಲಾಗಿದೆ.
ತಾಲ್ಲೂಕಿನ ಕಾಮಸಮುದ್ರ ವ್ಯಾಪ್ತಿ ದೊಡ್ಡಪನ್ನಾಂಡಹಳ್ಳಿಯಲ್ಲಿ ನಡೆದಿದ್ದ ಎರಡು ಸೀಮೆ ಹಸು ಮತ್ತು ನಾಲ್ಕು ಕುರಿ ಕಳವು ಪಕರಣವನ್ನು ಡಿವೈಎಸ್‌ಪಿ ಎಸ್.ಪಾಂಡುರಂಗ ಮತ್ತು ಕಾಮಸಮುದ್ರ ಸಿಪಿಐ ಜಿ.ಸಿ.ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಕಿರಣ್‌ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಆಂದ್ರಪ್ರದೇಶ ಚಿತ್ತೂರು ಜಿಲ್ಲೆಯ ಸುರೇಶ್ (34), ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಸತೀಶ್ (34), ರೂಪೇಶ್ (28), ವೆಂಕಟರಮಣಪ್ಪ(34)ಎಂಬುವವರನ್ನು ಕಳವು ಪ್ರಕರಣದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಮೂರು ಸೀಮೆ ಹಸು, ನಾಲ್ಕು ಕುರಿ, 23 ಹಂದಿ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ ವಶಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.