ADVERTISEMENT

ಮುಳಬಾಗಿಲು: ಅದ್ದೂರಿ ಗಂಗಮಾಂಭ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:13 IST
Last Updated 29 ಜನವರಿ 2026, 6:13 IST
ಗಂಗಮಾಂಭ ದೇವಿ 
ಗಂಗಮಾಂಭ ದೇವಿ    

ಮುಳಬಾಗಿಲು: ಸಂಕ್ರಾಂತಿ ಹಬ್ಬದ ಪ್ರಯುಕ್ತ ತಾಲ್ಲೂಕಿನ ಮುಷ್ಟೂರು ಗ್ರಾಮದ ಕೌಂಡಿನ್ಯ ನದಿಯ ತಟದಲ್ಲಿರುವ ಗಂಗಮಾಂಭ ದೇವಿ ಜಾತ್ರಾ ಮಹೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮ ಮಂಗಳವಾರ ಅದ್ದೂರಿಯಾಗಿ ನಡೆಯಿತು.

ಸಾವಿರಾರು ವರ್ಷಗಳ ಇತಿಹಾಸವಿರುವ ದೇವಾಲಯದಲ್ಲಿ ಮಂಗಳವಾರ ಹಾಗೂ ಬುಧವಾರ ಎರಡೂ ದಿನ ಕಾರ್ಯಕ್ರಮ ನಡೆಯಿತು.

ದೀಪೋತ್ಸವ ಪ್ರಯುಕ್ತ ದೇವಿಯ ಮೂಲ ವಿಗ್ರಹವನ್ನು ಅಲಂಕರಿಸಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ತಂಬಿಟ್ಟಿನ ಆರತಿಯನ್ನು ತಾಯಿಗೆ ಅರ್ಪಿಸಿದರು. ನಂತರ ತಾಯಿಯ ಶಿರಸ್ಸನ್ನು ಪೂಜಾರಿ ತಲೆಯ ಮೇಲೆ ಹೊತ್ತು ಮೆರವಣಿಗೆ ನಡೆಸಿದರು.

ADVERTISEMENT

ಶಾಸಕ ಸಮೃದ್ಧಿ ಮಂಜುನಾಥ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮುಖಂಡ ವಿ.ಆದಿನಾರಾಯಣ, ಕಾಡೇನಹಳ್ಳಿ ನಾಗರಾಜ್, ಎಂ.ಗೊಲ್ಲಹಳ್ಳಿ ಪ್ರಭಾಕರ್, ನಗವಾರ ಸತ್ಯಣ್ಣ ಮತ್ತಿತರರು ಉಪಸ್ಥಿತರಿದ್ದರು.

ಗಂಗಮಾಂಭ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಜನತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.