ADVERTISEMENT

ಸರ್ಕಾರಿ ಶಿಕ್ಷಕರ ವಿನೂತನ ಆಂದೋಲನ

1ರಿಂದ 5ನೇ ತರಗತಿಯ ದಾಖಲಾತಿ ಹೆಚ್ಚಿಸುವ ರಿಪೋರ್ಟ್‌ ಕಾರ್ಡ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 15:53 IST
Last Updated 16 ಏಪ್ರಿಲ್ 2025, 15:53 IST
ಬಂಗಾರಪೇಟೆ ತಾಲ್ಲೂಕಿನ ತಾಲ್ಲೂಕಿನ ದೇವಗಾನಹಳ್ಳಿ ಸರ್ಕಾರಿ ಶಾಲೆಯ ಹೊರನೋಟ
ಬಂಗಾರಪೇಟೆ ತಾಲ್ಲೂಕಿನ ತಾಲ್ಲೂಕಿನ ದೇವಗಾನಹಳ್ಳಿ ಸರ್ಕಾರಿ ಶಾಲೆಯ ಹೊರನೋಟ   

ಬಂಗಾರಪೇಟೆ: ಖಾಸಗಿ ಶಾಲೆಗಳ ಮಾದರಿಯಲ್ಲೆ ಸರ್ಕಾರಿ ಶಾಲಾ ಶಿಕ್ಷಕರು ದಾಖಲಾತಿ ಹೆಚ್ಚಿಸುವುದಕ್ಕಾಗಿ ದಾಖಲಾತಿ ಆಂದೋಲನವನ್ನು ಪ್ರಾರಂಭಿಸಿದ್ದು, ಸರ್ಕಾರಿ ಶಾಲೆಗಳಲ್ಲಿ ಸಿಗುವಂತಹ ವಿಶೇಷ ಸವಲತ್ತುಗಳನ್ನೆಲ್ಲಾ ಒಳಗೊಂಡ ವಿಶೇಷ ಕರಪತ್ರಗಳನ್ನು ಹಂಚುವ ಮೂಲಕ ಭಾರೀ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ತಾಲ್ಲೂಕಿನ ದೇವಗಾನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರು ಈ ವಿಶೇಷ ಆಂದೋಲನಕ್ಕೆ ಮುಂದಾಗಿದ್ದು, ತಮ್ಮ ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಪಟ್ಟಿ ಜೊತೆಗೆ ಮಕ್ಕಳ ಕೌಶಲ್ಯ ಅಭಿವೃದ್ದಿಯ ಕುರಿತು ಪ್ರಚಾರದಲ್ಲಿ ತೊಡಗಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ‘ನಮ್ಮ ನಡೆ ನೂರರ ದಾಖಲಾತಿ ಕಡೆ’, ‘ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಉಚಿತ–ಕಲಿಕೆ ಖಚಿತ–ಗುಣಮಟ್ಟ ನಿಶ್ಚಿತ’ ಎಂಬ ಆಕರ್ಷಕ ಘೋಷವಾಕ್ಯಗಳೊಂದಿಗೆ ದಾಖಲಾತಿ ಆಂದೋಲನ ಕೈಗೊಂಡಿದ್ದಾರೆ.

1 ತರಗತಿ ರಿಂದ 5ನೇ ತರಗತಿಯವರೆಗಿನ ದಾಖಲಾತಿ ಪ್ರಾರಂಭವಾಗಿದೆ. ಇಲ್ಲಿ ಉಚಿತ ಶಿಕ್ಷಣ, ಪಠ್ಯಪುಸ್ತಕ, ಆರೋಗ್ಯ ತಪಾಸಣೆ, ಸಮವಸ್ತ್ರ, ಶೂ-ಸಾಕ್ಸ್, ಮಧ್ಯಾಹ್ನ ಬಿಸಿ ಊಟ, ಮೊಟ್ಟೆ ಎಲ್ಲವೂ ಉಚಿತ, ಅಷ್ಟೇ ಅಲ್ಲ, ಆದರ್ಶ ಮತ್ತು ಮುರಾರ್ಜಿ ಪರೀಕ್ಷೆಗೆ ತರಬೇತಿ ಕೂಡ ಉಚಿತ. ಶನಿವಾರ ಬ್ಯಾಗ್ ಫ್ರೀ ಡೇ, ಪ್ರತಿ ತಿಂಗಳು ಪೋಷಕರ ಸಭೆ, ಪ್ರತಿ ಪಾಠದ ನಂತರ ಘಟಕ ಪರೀಕ್ಷೆಗಳು, ಡಾನ್ಸ್‌ ತರಗತಿ ಮತ್ತು ಸ್ಮಾರ್ಟ್ ಬೋರ್ಡ್ ತರಗತಿಗಳು ಎಲ್ಲವೂ ಉಚಿತ ಎನ್ನುವ ಸಂಗತಿಯನ್ನೇ ಪೋಷಕರಿಗೆ ಮತ್ತೆ ಮತ್ತೆ ಮನದಟ್ಟು ಮಾಡುವ ಕೆಲಸಗಳು ನಡೆದಿವೆ. ಯಾವ ತರಗತಿ/ಸೇವೆಗಳನ್ನು ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂಪಾಯಿ ಹಣ ತೆತ್ತು ಪಡೆಯುತ್ತಿರುವಿರೋ ಅವೆಲ್ಲವೂ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಸಿಗುತ್ತವೆ ಎನ್ನುವುದನ್ನು ಎಲ್ಲೆಡೆ ತಲುಪಿಸುವ ಕೆಲಸದಲ್ಲಿ ದೇವಗಾನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರು ನಿರತರಾಗಿದ್ದಾರೆ.

ADVERTISEMENT

ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕುರಿತಾದ ಮಾಹಿತಿ ನೀಡುವ ಶಾಲೆಯ ರಿಪೋರ್ಟ್ ಕಾರ್ಡ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸರ್ಕಾರ ರಜೆ ನೀಡಿದ್ದರೂ ಮಕ್ಕಳ ಏಳಿಗೆಗೆ ಶಿಕ್ಷಕರು ಕೈಗೊಂಡಿರುವ ಈ ಶ್ರಮ ಹಾಗೂ ಕ್ರಮ ಪೋಷಕರ ಹಾಗೂ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ಸರ್ಕಾರಿ ಶಾಲೆಯ ದಾಖಲಾತಿ ಕುರಿತಾದ ಮಾಸ್ಟರ್ ಪ್ಲಾನ್ ಹಾಗೂ ಗ್ರಾಮೀಣ ಸರ್ಕಾರಿ ಶಾಲೆಯ ಉಳಿವಿಗಾಗಿ ಶಿಕ್ಷಕರ ರೀಪೋರ್ಟ್ ಕಾರ್ಡ್ ಎಲ್ಲೆಡೆ ವೈರಲ್‌ ಆಗುತ್ತಿದೆ... 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.