ಕೋಲಾರ: ಮಾಜಿ ಸಚಿವ ಸಿ.ಬೈರೇಗೌಡ ಅವರ 12ನೇ ವರ್ಷದ ಸ್ಮರಣಾರ್ಥ ತಾಲ್ಲೂಕಿನ ನರಸಾಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಯುವ ಎಚ್‌ಪಿವಿ ಲಸಿಕೆಯನ್ನು ಮಂಗಳವಾರ ಉಚಿತವಾಗಿ ನೀಡಲಾಯಿತು.
ಬೈರೇಗೌಡ ಅವರ ಕುಟುಂಬ ಮತ್ತು ಬೆಳ್ಳೂರು ಕೃಷ್ಣಮಾಚಾರ್ ಹಾಗೂ ಶೇಷಮ್ಮ ಸ್ಮಾರಕ ನಿಧಿ ಟ್ರಸ್ಟ್‌ನಿಂದ ಈ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನಡೆದ ಕಾರ್ಯಕ್ರಮದಲ್ಲಿ 9ರಿಂದ 14 ವರ್ಷದೊಳಗಿನ ಸುಮಾರು 500 ಹೆಣ್ಣು ಮಕ್ಕಳು ಈ ಸೌಲಭ್ಯ ಪಡೆದರು.
‘ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಜಾಗತಿಕವಾಗಿ 6 ಲಕ್ಷ ಹೆಣ್ಣು ಮಕ್ಕಳಲ್ಲಿ ಈ ಸೋಂಕು ಇರುವ ಪ್ರಕರಣಗಳು ವರದಿಯಾಗಿವೆ. ಮಾರುಕಟ್ಟೆಯಲ್ಲಿ ಈ ಒಂದು ಲಸಿಕೆ ದರ ₹ 10 ಸಾವಿರಕ್ಕೂ ಅಧಿಕ. ಹೀಗಾಗಿ, ಅನೇಕ ಹೆಣ್ಣು ಮಕ್ಕಳು ಈ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸುವುದು ಹಾಗೂ ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.