ಸಾವು (ಪ್ರಾತಿನಿಧಿಕ ಚಿತ್ರ)
ಕೋಲಾರ: ತಾಲ್ಲೂಕಿನ ಬೆಟ್ಟದಹೊಸಹಳ್ಳಿ ಬಳಿ ಕೌಟುಂಬಿಕ ಕಲಹದಿಂದಾಗಿ ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೇರಹಳ್ಳಿ ಬೆಟ್ಟದ ಕುಪ್ಪಳ್ಳಿಯಲ್ಲಿ ಕೃತ್ಯ ನಡೆದಿದ್ದು, ಮುನಿರಾಜು (48) ಆತ್ಮಹತ್ಯೆಗೆ ಶರಣಾದ ಪತಿ.
ಕಳೆದ ಗುರುವಾರ ಪತ್ನಿ ಲಲಿತಾ (40) ಅವರನ್ನು ಮುನಿರಾಜು ಕೊಲೆ ಮಾಡಿ ಬೆಟ್ಟದಹೊಸಹಳ್ಳಿ ಬೆಟ್ಟದಲ್ಲಿ ಶವ ಬಿಸಾಡಿ ಪರಾರಿಯಾಗಿದ್ದ. ಈಗ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ತಾಯಿ ಹಾಗೂ ಈಗ ತಂದೆಯನ್ನು ಕಳೆದುಕೊಂಡ ಮೂವರು ಹೆಣ್ಣು ಮಕ್ಕಳು ಅನಾಥರಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.