ADVERTISEMENT

ವಿದ್ಯಾರ್ಥಿಗಳಿಗೆ ಕಿಕ್‍ ಬಾಕ್ಸಿಂಗ್‌ ತರಬೇತಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 6:00 IST
Last Updated 17 ನವೆಂಬರ್ 2022, 6:00 IST
ಕೋಲಾರದಲ್ಲಿ ಮಂಗಳವಾರ ನಡೆದ ಕಿಕ್‌ ಬಾಕ್ಸಿಂಗ್, ಆಯುಧ ತರಬೇತಿ ಉದ್ಘಾಟನೆ ಹಾಗೂ ಕರಾಟೆ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು
ಕೋಲಾರದಲ್ಲಿ ಮಂಗಳವಾರ ನಡೆದ ಕಿಕ್‌ ಬಾಕ್ಸಿಂಗ್, ಆಯುಧ ತರಬೇತಿ ಉದ್ಘಾಟನೆ ಹಾಗೂ ಕರಾಟೆ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು   

ಕೋಲಾರ: ನಗರದ ಇಂಡಿಯನ್ ಕೋಶಿಕಿ ಶಿಟೋ ರಿಯು ಕರಾಟೆ-ಡೂ ಫೆಡರೇಷನ್‌ನಿಂದ ಕಿಕ್‍ ಬಾಕ್ಸಿಂಗ್, ಆಯುಧ ತರಬೇತಿ ಉದ್ಘಾಟನೆ ಮತ್ತು ಕರಾಟೆ ಬ್ಲಾಕ್ ಬೆಲ್ಟ್ ಪರೀಕ್ಷೆಯನ್ನು ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹಿಂದೂಸ್ಥಾನ್ ಕರಾಟೆ ಫೆಡರೇಷನ್ ಸಂಸ್ಥಾಪಕ ಮತ್ತು ಗ್ರ್ಯಾಂಡ್‌ ಮಾಸ್ಟರ್ ಡಾ.ಎಸ್.ಎಂ. ವೆಟ್ರಿವೇಲ್ ಮತ್ತು ಮುಖ್ಯ ತರಬೇತುದಾರ ಶೇಖರ್, ಬೆಂಗಳೂರಿನ ಎನ್. ನವೀನ್‍ಗೌಡ ಕಾರ್ಯಕ್ರಮ ಉದ್ಘಾಟಿಸಿ, ಕರಾಟೆ ಬ್ಲಾಕ್ ಬೆಲ್ಟ್ ಪರೀಕ್ಷೆ ನಡೆಸಿದರು.

ಜಿಲ್ಲೆಯಿಂದ ಕೋಲಾರ, ನರಸಾಪುರ, ಮುಳಬಾಗಿಲು, ಶ್ರೀನಿವಾಸಪುರದ ವಿವಿಧ ಶಾಲೆಗಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕರಾಟೆ ತರಬೇತಿಯಲ್ಲಿ ಭಾಗವಹಿಸಿದ್ದರು.

ADVERTISEMENT

ಇಂಡಿಯನ್ ಕೋಶಿಕಿ ಶಿಟೋರಿಯು ಕರಾಟೆ-ಡೂ ಫೆಡರೇಷನ್‍ನಲ್ಲಿ ತರಬೇತಿ ಪಡೆದ ಗುರುದೀಪ್ ಎಸ್. ಗೌಡ ಎರಡನೇ ಬ್ಲಾಕ್ ಬೆಲ್ಟ್ ಪದವಿ ಮತ್ತು ಗೀತಾಂಜಲಿ ಎಂ.ಎಲ್., ಕವಿತಾ ಎಂ., ಗಗನಶ್ರೀ ಎಸ್., ಅಜಯ್ ಎಂ., ಶರಣ್ ಎಂ. ಮತ್ತು ಉಜ್ವಲ್ ಸಾಯಿರಾಮ್ ಜಿ. ಪ್ರಥಮ ಬ್ಲಾಕ್ ಬೆಲ್ಟ್ ಪಡೆದುಕೊಂಡರು. ಫೆಡರೇಷನ್‍ ಸಂಸ್ಥಾಪಕ ಮತ್ತು ತಾಂತ್ರಿಕ ನಿರ್ದೇಶಕ ಎಂ.ಜಿ. ಶ್ರೀನಿವಾಸಗೌಡ, ಮುಖ್ಯ ತರಬೇತುದಾರ ಎಂ.ಎನ್. ನಾಗೇಶ್, ಕೆ. ಶೇಶಾದ್ರಿ, ಎನ್. ನವೀನ್‍ಕುಮಾರ್, ಕೌಸರ್ ಸುಲ್ತಾನ, ಆದರ್ಶ, ಶಕ್ತಿವೇಲು, ಮಣಿ ವಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.