ADVERTISEMENT

ದ್ವಿಚಕ್ರ ವಾಹನ ಕಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 5:48 IST
Last Updated 17 ಆಗಸ್ಟ್ 2025, 5:48 IST

ಕೋಲಾರ: ನಗರ ಹಾಗೂ ಜಿಲ್ಲೆಯ ವಿವಿಧೆಡೆ ದ್ವಿಚಕ್ರ ವಾಹನ ಕಳ್ಳತನದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಗಲ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಎಸ್.ಎ.ಜಿ ರಸ್ತೆ ವಿ.ಕೋಟೆಯ ಎಸ್.ಸುಭಾನ್ (30) ಬಂಧಿತ ಆರೋಪಿ.

ಕಳ್ಳತನ ಮಾಡಿದ್ದ 6 ಬುಲೆಟ್ ದ್ವಿಚಕ್ರ ವಾಹನ, ಯಮಹಾ 1, ಸುಜುಕಿ ಆಕ್ಸಿಸ್ 1, ಆಕ್ಟಿವ್ 1, ಪ್ಯಾಷನ್ ಪ್ರೋ ಒಟ್ಟು 10 ದ್ವಿಚಕ್ರ ವಾಹನಗಳನ್ನು (ಅಂದಾಜು ಮೌಲ್ಯ ₹ 2,20,000) ವಶಪಡಿಸಿಕೊಂಡಿದ್ದಾರೆ.

ADVERTISEMENT

ಆರೋಪಿ ಪತ್ತೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಂ.ಎಚ್.ನಾಗ್ತೆ ನೇತೃತ್ವದಲ್ಲಿ ಗಲ್‌ಪೇಟೆ ವೃತ್ತದ ಸಿಪಿಐ ಲೋಕೇಶ್.ಎಂ.ಜೆ, ಪಿಎಸ್‌ಐ ವಿಠಲ್ ವೈ ತಳವಾರ್, ಸಿಬ್ಬಂದಿ ಮುನಿವೆಂಕಟಸ್ವಾಮಿ, ಶಪೀಉಲ್ಲಾ, ರಮೇಶ್, ರಾಜೇಶ್, ಸದಾಶಿವ, ಮಂಜುನಾಥ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.