ADVERTISEMENT

ಕೋಲಾರ, ಅರಭಾವಿಗೆ ಸಮಗ್ರ ಪ್ರಶಸ್ತಿ

ಯುವಜನೋತ್ಸವ ಕಲಾಶೃಂಗ-2025: ಬೆಂಗಳೂರು ತಂಡಕ್ಕೆ ರನ್ನರ್‌ ಅಪ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:08 IST
Last Updated 4 ನವೆಂಬರ್ 2025, 7:08 IST
ಕೋಲಾರದಲ್ಲಿ ನಡೆದ ಯುವಜನೋತ್ಸವ ಕಲಾಶೃಂಗ-2025 ಸಮಾರೋಪ ಸಮಾರಂಭದಲ್ಲಿ ನಟ ಯುವ ರಾಜ್‌ಕುಮಾರ್‌ ಹಾಗೂ ಗಣ್ಯರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು
ಕೋಲಾರದಲ್ಲಿ ನಡೆದ ಯುವಜನೋತ್ಸವ ಕಲಾಶೃಂಗ-2025 ಸಮಾರೋಪ ಸಮಾರಂಭದಲ್ಲಿ ನಟ ಯುವ ರಾಜ್‌ಕುಮಾರ್‌ ಹಾಗೂ ಗಣ್ಯರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು   

ಕೋಲಾರ: ಕೋಲಾರದ ತೋಟಗಾರಿಕಾ ಮಹಾವಿದ್ಯಾಲಯ ಹಾಗೂ ಬೆಳಗಾವಿ ಜಿಲ್ಲೆಯ ಅರಭಾವಿಯ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಜಯಿಸಿವೆ. ಬೆಂಗಳೂರಿನ ತೋಟಗಾರಿಕಾ ಮಹಾವಿದ್ಯಾಲಯ ರನ್ನರ್‌ ಅಪ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ನಗರದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೋಲಾರ ತೋಟಗಾರಿಕಾ ಮಹಾವಿದ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ16ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಕಲಾಶೃಂಗ–2025ದಲ್ಲಿ ಗಣ್ಯರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

10 ಮಹಾವಿದ್ಯಾಲಯಗಳ ನಡುವೆ ಮೂರು ದಿನ 20 ಸ್ಪರ್ಧೆಗಳು ‌ನಡೆದವು. ಇಲ್ಲಿ ಗೆದ್ದವರು ರಾಷ್ಟ್ರ‌ಮಟ್ಟದ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಸಮಾರೋಪ ಸಮಾರಂಭದಲ್ಲಿ ನಟ ಯುವ ರಾಜ್‌ಕುಮಾರ್‌, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಎಸ್.ಎನ್.ವಾಸುದೇವನ್, ಎಚ್.ಜೆ.ಮನೋಹರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ರಾಮಚಂದ್ರ ನಾಯ್ಕ, ತೋಟಗಾರಿಕಾ ಮಹಾವಿದ್ಯಾಲಯ ಡೀನ್ ರಾಘವೇಂದ್ರ ಮೇಸ್ತ ಉಪಸ್ಥಿತರಿದ್ದರು.

ಕೋಲಾರದಲ್ಲಿ ನಡೆದ ಯುವಜನೋತ್ಸವ ಕಲಾಶೃಂಗದಲ್ಲಿ ಕೋಲಾರದ ತೋಟಗಾರಿಕಾ ಮಹಾವಿದ್ಯಾಲಯ ಹಾಗೂ ಬೆಳಗಾವಿ ಜಿಲ್ಲೆಯ ಅರಭಾವಿಯ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಜಯಿಸಿದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.