ಕೋಲಾರ: ಪ್ರಸಿದ್ಧ ನಾದಸ್ವರ ಕಲಾವಿದ ವಿದ್ವಾನ್ ಆರ್.ಶ್ರೀರಾಮುಲು (88) ಶನಿವಾರ ನಗರದ ಕಠಾರಿಪಾಳ್ಯದ ತಮ್ಮ ನಿವಾಸದಲ್ಲಿ ಅನಾರೋಗ್ಯದಿಂದ ನಿಧನರಾದರು.
ಅವರಿಗೆ ಆರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಟೇಕಲ್ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶ್ರೀರಾಮುಲು ಕಳೆದ ವರ್ಷ ‘ಟಿ.ಚೌಡಯ್ಯ ಪ್ರಶಸ್ತಿ’ಗೆ (2023–24) ಭಾಜನರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಕೂಡ ಒಲಿದಿತ್ತು.
16ನೇ ವಯಸ್ಸಿನಿಂದಲೇ ನಾದಸ್ವರ ನುಡಿಸುತ್ತಿದ್ದ ಅವರು 1,500ಕ್ಕೂ ಅಧಿಕ ಮಂದಿಗೆ ನಾದಸ್ವರ ಪಾಠ ಮಾಡಿದ್ದಾರೆ. ತಮ್ಮ ಬದುಕಿನ ಕೊನೆಯವರೆಗೆ ನಿತ್ಯ ಒಂದು ಗಂಟೆ ನಾದಸ್ವರ ನುಡಿಸುತ್ತಿದ್ದರು. ಇವರದ್ದು ನಾಲ್ಕು ದಶಕ ಮೀರಿ ಸಾಗಿದ ಕಲಾ ಸಾಧನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.