ಪ್ರಜಾವಾಣಿ ವಾರ್ತೆ
ಕೋಲಾರ: ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಏ.28 ರಂದು ಸಂಜೆ 6 ಗಂಟೆಗೆ ಧ್ವಜಾರೋಹಣದೊಂದಿಗೆ ಕರಗಮಹೋತ್ಸವ ಆರಂಭವಾಗಲಿದೆ. ಮೇ 2 ರ ರಾತ್ರಿ 10 ಗಂಟೆಗೆ ಹೂವಿನ ಕರಗ ನಡೆಯಲಿದೆ.
ಏ.29 ರಂದು ರಾತ್ರಿ 8 ಗಂಟೆಗೆ ಹಸಿ ಕರಗ ಮಹೋತ್ಸವ ನಡೆಯಲಿದ್ದು, 30 ರಂದು ಕರಗದ ಅತ್ತೆ ಮನೆ ಕಲ್ಯಾಣೋತ್ಸವ, ತವರು ಮನೆ ಸೇವೆ ನಡೆಯಲಿದೆ.
ಮೇ 1 ರಂದು ಗುರುವಾರ ಸಂಜೆ 6 ಗಂಟೆಗೆ ದೀಪೋತ್ಸವ ನಡೆಯಲಿದ್ದು, ಮೇ 2 ರ ರಾತ್ರಿ 10 ಗಂಟೆಗೆ ಹೂವಿನ ಕರಗಮಹೋತ್ಸವ ನಡೆಯಲಿದೆ. ಹೂವಿನ ಕರಗದ ದಿನ ಗ್ರಾಮದ ದೇವರುಗಳಾದ ಅಷ್ಟಮೂರ್ತಮ್ಮ ದೇವಿ, ದ್ರೌಪದಮ್ಮ, ಧರ್ಮರಾಯಸ್ವಾಮಿ, ವೇಣುಗೋಪಾಲಸ್ವಾಮಿ, ರೇಣುಕಾ ಯಲ್ಲಮ್ಮ ದೇವಿಯ ಪಲ್ಲಕ್ಕಿ ಮೆರವಣಿಗೆಯೂ ನಡೆಯಲಿದೆ.
ಮೇ 3 ರಂದು ಪೋತಲರಾಜ ಗಾವು, ಮೇ 4 ರಂದು ವಸಂತೋತ್ಸವ ಮತ್ತು ಧ್ವಜಾವರೋಹಣದೊಂದಿಗೆ ಕರಗ ಮಹೋತ್ಸವ ಕೊನೆಗೊಳ್ಳಲಿದೆ.
ಈ ಬಾರಿ ಕರಗವನ್ನು ಕಾಕಿನತ್ತ ಗ್ರಾಮದ ಬಾಲರಾಜ್ ಹೊರಲಿದ್ದು, ಭಾರತ ಪೂಜಾರಿಯಾಗಿ ಚಿಂತಮಾಕಲಹಳ್ಳಿಯ ಸಿ.ಎಂ.ವೆಂಕಟರವಣಪ್ಪ ಕಾರ್ಯ ನಿರ್ವಹಿಸುವರು, ಕುಲದ ಗೌಡರಾದ ಸಿ.ಎಂ.ನಾಗರಾಜ್, ಯಜಮಾನ್ ಸಿ.ವಿ.ಮುರುಗೇಶ್ ಇಡೀ ಕರಗ ಮಹೋತ್ಸವ ಉಸ್ತುವಾರಿ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.