ADVERTISEMENT

ಮದನಹಳ್ಳಿ: ಬೇಸಿಗೆ ಶಿಬಿರ ಅಂತ್ಯ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 15:03 IST
Last Updated 27 ಏಪ್ರಿಲ್ 2025, 15:03 IST
ಕೋಲಾರ ತಾಲ್ಲೂಕಿನ ಮದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಮಕ್ಕಳು ಚಿತ್ರಗಳನ್ನು ಪ್ರದರ್ಶಿಸಿದರು
ಕೋಲಾರ ತಾಲ್ಲೂಕಿನ ಮದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಮಕ್ಕಳು ಚಿತ್ರಗಳನ್ನು ಪ್ರದರ್ಶಿಸಿದರು    

ಪ್ರಜಾವಾಣಿ ವಾರ್ತೆ

ಕೋಲಾರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮದನಹಳ್ಳಿ ಸಹಯೋಗದೊಂದಿಗೆ ಒಂದು ವಾರ ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್ ಸಂಸ್ಥೆಯು ಬೇಸಿಗೆ ಶಿಬಿರವನ್ನು ತಾಲ್ಲೂಕಿನ ಮದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿತ್ತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಿ.ಆರ್.ಪಿ ಸುರೇಶ್ ಬಾಬು ಮಾತನಾಡಿ, ‘ಎಸ್‌ವಿವೈಎಂ ಸಂಸ್ಥೆಯು 25 ಶಾಲೆಗಳನ್ನು ದತ್ತು ತೆಗೆದುಕೊಂಡು ಗಣಿತ ವಿಜ್ಞಾನ ಮತ್ತು ಸ್ಕಿಲ್ಲಿಂಗ್ ಲ್ಯಾಬ್‌ಗಳಿಗೆ ಸಾಮಗ್ರಿ ಒದಗಿಸಿದೆ. ಪ್ರತಿ ಶಾಲೆಗೂ ಶಿಕ್ಷಕರನ್ನು ಸಹ ನೀಡಿದೆ’ ಎಂದರು.

ADVERTISEMENT

ಮುಖ್ಯ ಶಿಕ್ಷಕ ಬದ್ರಿನಾರಾಯಣ ಮಾತನಾಡಿ, ‘ಸಂಸ್ಥೆಯು ಬೇಸಿಗೆ ಶಿಬಿರದಲ್ಲಿ ಒಂದು ವಾರ ಉತ್ತಮ ವಿಷಯ ಕಲಿಸುತ್ತಿದೆ. ಗಡಿಯಾರ, ಮಿಕ್ಸಡ್ ಮೀಡಿಯಾ, ಸಂಚಾರ ನಿಯಮಗಳು, ವಿಲೇಜ್ ಮ್ಯಾಪಿಂಗ್, ಕ್ಷೇತ್ರ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಪನ್ಮೂಲ ವ್ಯಕ್ತಿಗಳ ಜೊತೆ ವಿದ್ಯಾರ್ಥಿಗಳ ಸಂಭಾಷಣೆ. ಈ ಎಲ್ಲಾ ಚಟುವಟಿಕೆಗಳು ಮಕ್ಕಳಲ್ಲಿ ಉತ್ಸಾಹವನ್ನು ತುಂಬಿವೆ’ ಎಂದು ಹೇಳಿದರು.

ಗ್ರಾಮದ ಬೈರಾ ರೆಡ್ಡಿ ಮತ್ತು ಮನೋಹರ್, ಶಾಲಾ ಶಿಕ್ಷಕ ಮುನಿರಾಜು, ಎಸ್‌ವಿವೈಎಂ ಸಂಸ್ಥೆಯ ಎಸ್.ಎಸ್.ಎಫ್ ಚೇತನ್, ಎಸ್.ಎಫ್ ನಂದಿನಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ದ್ರಾಕ್ಷಾಯಿಣಿ, ‌ಗ್ರಾಮ ಪಂಚಾಯತಿ ಸದಸ್ಯರಾದ ರಾಮಾಂಜಿ, ಎಸ್.ವಿ.ವೈ.ಎಂ ಎಸ್.ಎಫ್‍ಓ ಗಳಾದ ಆನಂದ್, ಸುಷ್ಮಾ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಮೈತ್ರಿ, ಆಂಜಿನಪ್ಪ, ಸದಸ್ಯರಾದ ಮಮತಾ, ವೀಣಾ, ನಾರಾಯಣಸ್ವಾಮಿ, ಸೌಮ್ಯ, ವೆಂಕಟರೋಣಪ್ಪ, ಮುನಿರಾಜು, ಆಶಾ, ಅನಿತಾ, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.