ಕೆಜಿಎಫ್: ನೀರಿಲ್ಲದ ಬಾವಿಗೆ ಬಿದ್ದು ನಿತ್ರಾಣಗೊಂಡಿದ್ದ ಕೃಷ್ಣಮೃಗವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಶನಿವಾರ ರಕ್ಷಿಸಿದ್ದಾರೆ.
ಟಿ.ಗೊಲ್ಲಹಳ್ಳಿ ನೀರಿಲ್ಲದ ಸುಮಾರು 30 ಅಡಿ ಆಳದ ಬಾವಿಯಲ್ಲಿ ಜಿಂಕೆ ಅಕಸ್ಮಿಕವಾಗಿ ಬಿದ್ದಿತ್ತು. ಅರಣ್ಯ ಇಲಾಖೆ ಮನವಿಯಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬಾವಿಗೆ ಇಳಿದು, ಜಿಂಕೆಯನ್ನು ಸುರಕ್ಷಿತವಾಗಿ ಮೇಲಕ್ಕೆ ತೆಗೆದರು. ನಂತರ ನೀರು ಕುಡಿಸಿ ಆರೈಕೆ ಮಾಡಿ ಕಾಡಿಗೆ ಬಿಟ್ಟರು. ಸಹಾಯಕ ಅಗ್ನಿಶಾಮಕದಳದ ಅಧಿಕಾರಿ ಉಮೇಶ್ ತಲಕೇರಿ ಮತ್ತು ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.