ADVERTISEMENT

ಕೋಲಾರ | ಒಳಮೀಸಲಾತಿ ಜಾರಿಗೆ ಒತ್ತಾಯ: ಕೇಶ ಮುಂಡನೆ, ಅರೆ ಬೆತ್ತಲೆ ಪ್ರತಿಭಟನೆ

ಒಳಮೀಸಲಾತಿಗೆ ಜಿಲ್ಲಾ ಮಾದಿಗ ಸಮುದಾಯದವರು ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 5:26 IST
Last Updated 2 ಆಗಸ್ಟ್ 2025, 5:26 IST
ಕೋಲಾರದ ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಮಾದಿಗ ದಂಡೋರ ನೇತೃತ್ವದಲ್ಲಿ ಜಿಲ್ಲಾ ಮಾದಿಗ ಸಮುದಾಯದವರು ಅರೆ ಬೆತ್ತಲೆಯಾಗಿ ಕೇಶ ಮುಂಡನೆ ಮಾಡಿಸಿಕೊಳ್ಳವ ಮೂಲಕ ಪ್ರತಿಭಟನೆ ನಡೆಸಿದರು
ಕೋಲಾರದ ಜಿಲ್ಲಾಡಳಿತ ಭವನ ಎದುರು ಶುಕ್ರವಾರ ಮಾದಿಗ ದಂಡೋರ ನೇತೃತ್ವದಲ್ಲಿ ಜಿಲ್ಲಾ ಮಾದಿಗ ಸಮುದಾಯದವರು ಅರೆ ಬೆತ್ತಲೆಯಾಗಿ ಕೇಶ ಮುಂಡನೆ ಮಾಡಿಸಿಕೊಳ್ಳವ ಮೂಲಕ ಪ್ರತಿಭಟನೆ ನಡೆಸಿದರು    

ಕೋಲಾರ: ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಕೋಲಾರ ಜಿಲ್ಲಾಡಳಿತ ಭವನದ ಮುಂದೆ ಶುಕ್ರವಾರ ಮಾದಿಗ ದಂಡೋರ ನೇತೃತ್ವದಲ್ಲಿ ಜಿಲ್ಲಾ ಮಾದಿಗ ಸಮುದಾಯದವರು ಅರೆ ಬೆತ್ತಲೆಯಾಗಿ ಕೇಶ ಮುಂಡನೆ ಮಾಡಿಸಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು.

ಮಾದಿಗ ಸಮುದಾಯದ ಮುಖಂಡರು ಮಾತನಾಡಿ, ‘ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಜಾರಿ ಆಗಬೇಕಿದ್ದ ಒಳಮೀಸಲಾತಿ ಬೇಡಿಕೆಗಾಗಿ 35 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ನನೆಗುದಿಗೆ ಬಿದ್ದಿದೆ. ಪರಿಶಿಷ್ಟ ಜಾತಿಯಲ್ಲಿರುವ 101 ಸಮುದಾಯಗಳಿಗೆ ಒಳಮೀಸಲಾತಿ ನೀಡುವಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರೂ ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಇದೇ ತಿಂಗಳ 11ರಂದು ಆರಂಭವಾಗಲಿರುವ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೆ ಘೋಷಣೆ ಮಾಡದಿದ್ದರೆ ಆ.18ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಮಾದಿಗ ದಂಡೋರದ ರಾಜ್ಯ ಉಪಾಧ್ಯಕ್ಷ ಸಾಹುಕಾರ್ ಶಂಕರಪ್ಪ, ಹಾರೋಳ್ಳಿ ವೆಂಕಟೇಶ್, ಆಲೇರಿ ಮುನಿರಾಜು, ವೆಂಕಟಸ್ವಾಮಿ, ದಿನ್ನೆ ಹೊಸಹಳ್ಳಿ ಆಂಜಿ, ಹಾರೋಹಳ್ಳಿ ಸೀನ, ಜೆ.ಎಂ.ದೇವರಾಜ್, ವೇಣು ವಹಿಸಿದ್ದರು. ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.