ADVERTISEMENT

ಮಾಲೂರು ಪುರಸಭೆ: ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 14:35 IST
Last Updated 23 ಆಗಸ್ಟ್ 2024, 14:35 IST
<div class="paragraphs"><p>ಮಾಲೂರು ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಪುರಸಭಾ ಸದಸ್ಯೆಕೋಮಲ ನಾರಾಯಣ್ ಅಧ್ಯಕ್ಷರಾಗಿ ಹಾಗೂ ಕಾಂಗ್ರೆಸ್ ನಲ್ಲೇ ಗುರ್ತಿಸಿಕೊಂಡಿದ್ದ, ಬಿಜೆಪಿ ಪುರಸಭೆ ಸದಸ್ಯೆ ವಿಜಯಲಕ್ಷ್ಮಿ ಕೃಷ್ಣಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.</p></div>

ಮಾಲೂರು ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಪುರಸಭಾ ಸದಸ್ಯೆಕೋಮಲ ನಾರಾಯಣ್ ಅಧ್ಯಕ್ಷರಾಗಿ ಹಾಗೂ ಕಾಂಗ್ರೆಸ್ ನಲ್ಲೇ ಗುರ್ತಿಸಿಕೊಂಡಿದ್ದ, ಬಿಜೆಪಿ ಪುರಸಭೆ ಸದಸ್ಯೆ ವಿಜಯಲಕ್ಷ್ಮಿ ಕೃಷ್ಣಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

   

ಮಾಲೂರು: ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೋಮಲ ನಾರಾಯಣ್ ಅಧ್ಯಕ್ಷರಾಗಿ ಹಾಗೂ ಕಾಂಗ್ರೆಸ್ ನಲ್ಲೇ ಗುರ್ತಿಸಿಕೊಂಡಿದ್ದ, ಬಿಜೆಪಿ ಪುರಸಭೆ ಸದಸ್ಯೆ ವಿಜಯಲಕ್ಷ್ಮಿ ಕೃಷ್ಣಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ತಹಶೀಲ್ದಾರ್‍ ರಮೇಶ್ ತಿಳಿಸಿದ್ದಾರೆ.

ಪಟ್ಟಣದ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣೆ ಆಯೋಗ ಆಗಸ್ಟ್ 23 ರಂದು ದಿನಾಂಕ ನಿಗದಿ ಪಡಿಸಿತು.

ADVERTISEMENT

ಸರ್ಕಾರ ಪ್ರಕಟಿಸಿರುವ ಮೀಸಲಾತಿ ಪ್ರಕಾರ ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ ಸ್ಥಾನವನ್ನು ಮೀಸಲಿರಿಸಿದ್ದು,ಪಟ್ಟಣದ 5 ನೇ ವಾರ್ಡಿನ ಕಾಂಗ್ರೆಸ್ ಪುರಸಭೆ ಸದಸ್ಯೆ ಕೋಮಲ ನಾರಾಯಣ್ ಅಧ್ಯಕ್ಷರಾಗಿ ಹಾಗೂ 12 ನೇವಾರ್ಡಿನ ವಿಜಯಲಕ್ಷ್ಮಿ ಕೃಷ್ಣಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

27 ಪುರಸಭಾ ಸದಸ್ಯರನ್ನು ಹೊಂದಿರುವ ಮಾಲೂರು ಪಟ್ಟಣ ಪುರಸಭೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 10, ಜಿಡಿಎಸ್ 1, ಪಕ್ಷೇತರರು ಪಕ್ಷೇತರರು 5 ಒಟ್ಟು 27 ಮಂದಿ ಸದಸ್ಯರು ಇದ್ದಾರೆ.

ಶುಕ್ರವಾರ ನಡೆದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 11 ಮಂದಿ ಸದಸ್ಯರೊಂದಿಗೆ ಜೆಡಿಎಸ್ 1, ಪಕ್ಷೇತರರು 3 ಬಿಜೆಪಿ 4 ಸೇರಿದಂತೆ ಒಟ್ಟು 19 ಪುರಸಭೆ ಸದಸ್ಯರು ಕಾಂಗ್ರೆಸ್ ಪರವಾಗಿ ಗುರ್ತಿಸಿಕೊಂಡಿದ್ದರು.

ಬಿಜೆಪಿಯ ಪುರಸಭಾ ಸದಸ್ಯರಾದ 27 ನೇ ವಾರ್ಡಿನ ಸುಮಿತ್ರ, 12ನೇವಾಡೀನ ವಿಜಯಲಕ್ಷ್ಮಿ ಕೃಷ್ಣಪ್ಪ, 9 ವಾರ್ಡಿನ ಸದಸ್ಯ ಸಿ.ಮುನಿರಾಜು, 14 ನೇವಾರ್ಡಿನ ಪವಿತ್ರ ರಾಘವೇಂದ್ರ ಕಾಂಗ್ರೆಸ್ ನಲ್ಲಿ ಗುರ್ತಿತಿಸಿ ಕೊಂಡಿದ್ದರು. ಇವರಲ್ಲಿ14 ನೇವಾರ್ಡಿನ ಪವಿತ್ರ ರಾಘವೇಂದ್ರ ಚುನಾವಣೆಗೆ ಹಾಜರಾಗಿಲ್ಲ. ಇದರಿಂದ 18 ಸದಸ್ಯರ ಹಾಗೂ ಶಾಸಕರ ಒಂದು ಮತ ಸೇರಿ 19 ಮತಗಳು ಕಾಂಗ್ರೆಸ್ ಪರ ಇದ್ದವು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೋಮಲ ನಾರಾಯಣ್ 19 ಮತ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ವಿಜಯಲಕ್ಷ್ಮಿ 19 ಮತಗಳು ಪಡೆದು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬಿಜೆಪಿ ವತಿಯಿಂದ 18 ವಾರ್ಡಿನ ಸುಮಿತ್ರ ರಾಮಮೂರ್ತಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 24 ನೇ ವಾರ್ಡಿನ ಅನಿತಾ ನಾಗರಾಜ್ ನಾಮ ಪತ್ರ ಸಲ್ಲಿಸಿದ್ದರು. ಇವರು ತಲಾ 7ಮತಗಳನ್ನು ಪಡೆದು ಪರಭಾಗೊಂಡರು.

10 ನೇ ವಾರ್ಡಿನ ಪಕ್ಷೇತರ ಪುರಸಭಾ ಸದಸ್ಯ ಭಾನುತೇಜ ಚುನಾವಣೆಯಲ್ಲಿ ಭಾಗವಹಿಸಿಸದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರಿಗೆ ಮತ ಹಾಕಲಿಲ್ಲ.

ಅಧ್ಯಕ್ಷ ಗಾದಿಗೆ ಸ್ವಪಕ್ಷದವರಿಂದಲೇ ಪೈಪೋಟಿ: ಆರಂಭದಿಂದಲೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್ ಅವರು ತಮ್ಮ ಪತ್ನಿ 5ನೇವಾರ್ಡಿನ ವಿಜಯಲಕ್ಷ್ಮಿ ಅವರನ್ನು ಪುರಸಭೆ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಪ್ರಯತ್ನ ನಡೆಸಿದ್ದರು. ಹಿಂದುಳಿದ ಸಮಾಜ ಕುಂಬಾರ ಸಮಾಜಕ್ಕೆ ಸೇರಿರುವ ವಿಜಯಲಕ್ಷ್ಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಪ್ರಯತ್ನ ವಿಫಲವಾಯಿತು. ಆದರೇ ಶಾಸಕ ಕೆವೈ.ನಂಜೇಗೌಡರು ಕುರುಬ ಸಮಾಜಕ್ಕೆ ಸೇರಿದ ಸದಸ್ಯರನ್ನೆ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಪಟ್ಟು ಮಾಡಿದ ಹಿನ್ನಲೆಯಲ್ಲಿ ಕುರಬ ಸಮಾಜಕ್ಕೆ ಸೇರಿದ 5 ನೇ ವಾರ್ಡಿನ ಕೋಮಲ ನಾರಾಯಣ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಶಾಸಕ ಕೆ.ವೈ ನಂಜೇಗೌಡ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಪಟ್ಟಣಕ್ಕೆ ₹ 1 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ₹ 350 ಕೋಟಿ ವೆಚ್ಚದಲ್ಲಿ 3 ಕಿಮೀ ಪ್ಲೈಹೊವರ್‍, 4 ಲೈನ್ ರಸ್ತೆ , ₹ 24 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ, ₹ 21 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಆಶ್ರಯ ಸಮಿತಿವತಿಯಿಂದ ನಿರಾಶ್ರಿತ 1200 ಮಂದಿಗೆ ಉಚಿತ ನಿವೇಶನ ಸೇರಿದಂತೆ ಪ್ರತಿಯೋಬ್ಬರಿಗೂ ಉಚಿತ ಮನೆ ನಿರ್ಮಾಣ ಮಾಡಿಕೊಡಲಾಗುವುದು. ₹ 7.5ಕೋಟಿ ವೆಚ್ಚದಲ್ಲಿನಿರ್ಮಾಣ ಮಾಡಿರುವ ಕಸ ವಿಲೇವಾರಿ ಘಟಕ ಕಾಮಗಾರಿ ಪೂರ್ಣಗೊಂಡಿದೆ. ಮಾಲೂರು ಪಟ್ಟಣವನ್ನು ಉಹೆಗೂ ಸಿಲುಕದ ಹಾಗೆ ಅಭಿವೃದ್ಧಿಗೊಳಿಸುವುದಾಗಿ ತಿಳಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕೋಲಾರ ಜಿಲ್ಲಾ ಉಸ್ತವಾರಿ ನಾರಾಯಣಸ್ವಾಮಿ, ಮಾಜಿ ಶಾಸಕ ಎ.ನಾಗರಾಜು,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್, ಕೆಪಿಸಿಸಿ ಸದಸ್ಯರಾದ ಅಂಜನಿ ಸೋಮಣ್ಣ, ಪ್ರದೀಪ್ ರೆಡ್ಡಿ, ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮದುಸೂದನ್,ವಿಜಯನಾರಸಿಂಹ, ಉಚಿತ ಭಾಗ್ಯಗಳ ಸಮಿತಿ ಜಿಲ್ಲಾಉಪಾಧ್ಯಕ್ಷ ಅಶ್ವತರೆಡ್ಡಿ, ಮುಖಂಡರಾದಕ್ಷೇತ್ರನಹಳ್ಳಿ ವೆಂಕಟೇಶ್ ಗೌಡ, ಸತೀಶ್, ಹನುಮಂತರೆಡ್ಡಿ ಇನ್ನಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.