ಮಾಲೂರು: ತಾಲ್ಲೂಕಿನ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣ ಸ್ವಾಮಿ ದೇಗುಲದಲ್ಲಿ ಮಂಗಳವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು.
ಹುಂಡಿಯಲ್ಲಿ 50 ಗ್ರಾಂ ಚಿನ್ನ, 545 ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು ₹64.46 ಲಕ್ಷ ಸಂಗ್ರಹವಾಗಿದೆ. ಇಷ್ಟೇ ಅಲ್ಲದೆ ಹುಂಡಿಯಲ್ಲಿ ಪ್ರೇಮ ಪತ್ರವನ್ನು ಹಾಕಿದ್ದಾರೆ ಎಂದು ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ತಿಳಿಸಿದರು.
ಕಳೆದ ನಾಲ್ಕು ತಿಂಗಳಿನಲ್ಲಿ ಇಷ್ಟು ಸಂಗ್ರಹವಾಗಿದ್ದು, ಸಂಗ್ರಹದ ಹಣವನ್ನು ದೇವಾಲಯದ ಖಾತೆಗೆ ಜಮಾ ಮಾಡಲಾಯಿತು. ಬೆಳಿಗ್ಗೆ 11ಕ್ಕೆ ಆರಂಭವಾದ ಹುಂಡಿ ಎಣಿಕೆ ಕಾರ್ಯವು ಸಂಜೆಯವರೆಗೂ ನಡೆಯಿತು.
ತಹಶೀಲ್ದಾರ್ ರಮೇಶ್, ಹರಿಪ್ರಸಾದ್, ಸಂಪತ್, ಶ್ರೀಪತಿ, ಪದ್ಮಾವತಿ, ಚಲುವಸ್ವಾಮಿ, ವೆಂಕೊಬರಾವ್, ರೂಪೇಂದ್ರ, ಹರೀಂದ್ರ ಗೋಪಾಲ್, ನಾಗರಾಜ್, ಪ್ರಭಾಕರ್, ವಿಜಯ್ ಕುಮಾರ್, ಕೇಶವ್ ಮುರ್ತಿ, ವೆಂಕಟೇಶ್, ಶ್ರೀನಿವಾಸ್, ದೇವರಾಜ್, ಚಂದ್ರಯ್ಯ, ಜಯಪಾಲ್, ರಾಮದಾಸ್, ಮಂಜುನಾಥ್, ಚಂದ್ರಶೇಖರ್, ಲಕ್ಷಮ್ಮ, ಮಂಜಮ್ಮ, ರಾಜಮ್ಮ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.