ADVERTISEMENT

ಮುಳಬಾಗಿಲು: 200ಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 15:46 IST
Last Updated 1 ನವೆಂಬರ್ 2019, 15:46 IST

ಮುಳಬಾಗಿಲು: ನಗರಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಸುಮಾರು 200ಕ್ಕೂ ಅಧಿಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಗರಸಭೆಗೆ ಆಗಮಿಸಿದ್ದರಿಂದ ಮೂರು ಗಂಟೆಗೆ ಸಮಯ ಮುಗಿದರೂ ಚುನಾವಣಾಧಿಕಾರಿಗಳ ವಿವೇಚನೆಯಿಂದ ಎಲ್ಲರಿಗೂ ಟೋಕನ್ ನೀಡಿ ರಾತ್ರಿಯ ತನಕ ನಾಮಪತ್ರ ಸ್ವೀಕರಿಸಿದ ಘಟನೆ ಗುರುವಾರ ನಡೆಯಿತು.

ನಗರಸಭೆಯ 31 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯಲ್ಲಿ ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರಿಂದ ಇದುವರೆಗೂ ಪಕ್ಷೇತರರು ಸೇರಿದಂತೆ ಬುಧವಾರವರೆಗೂ 79 ಜನರು ನಾಮಪತ್ರ ಸಲ್ಲಿಸಿದ್ದರು, ಸ್ಥಳೀಯ ಸಂಸ್ಥೆಯಲ್ಲಿ ಸದಸ್ಯರಾಗಲು ಆಸೆ ಹೊತ್ತ ನೂರಾರು ಆಕಾಂಕ್ಷಿಗಳು ಆಗಮಿಸಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದರಿಂದ ಅಧಿಕಾರಿಗಳು ಯಾವುದೇ ಲೋಪದೋಷಗಳಿಗೆ ಎಡೆ ಮಾಡಿಕೊಡದಂತೆ ಸೂಕ್ತವಾದ ನಾಮಪತ್ರಗಳನ್ನು ಸ್ವೀಕರಿಸಿದ್ದರಿಂದ ತಡ ರಾತ್ರಿವರೆಗೂ ಪ್ರಕ್ರಿಯೆ ನಡೆಯಿತು.

ನಾಮಪತ್ರ ಸಲ್ಲಿಕೆಯ ಆರಂಭದಿಂದಲೂ ಬುದವಾರ ದವರೆಗೂ ಬಹುತೇಕವಾಗಿ ಪಕ್ಷೇತರರೇ ನಾಮಪತ್ರ ಸಲ್ಲಿಸಿದ್ದರು, ಆದರೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಸಿಪಿಎಂ ಮತ್ತು ಬಿಎಸ್‌ಪಿ ಪಕ್ಷಗಳು ಗುರುವಾರ ನಾಮಪತ್ರ ಸಲ್ಲಿಸಲು ಒಳ್ಳೆಯ ದಿನವೆಂದು ತಮ್ಮ ಪಕ್ಷಗಳ ಅಭ್ಯರ್ಥಿಗಳಿಗೆ ಬಿ ಪಾರಂ ವಿತರಣೆ ಮಾಡಿದ್ದರಿಂದ ತರಾತುರಿಯಲ್ಲಿ ನಾಮಪತ್ರ ಸಲ್ಲಿಸಲು ಬಂದಿದ್ದರು, ಅದರೊಂದಿಗೆ ಒಂದಷ್ಟು ಪಕ್ಷೇತರರು ತಮ್ಮ ಬೆಂಬಲಿಗರೊಂದಿಗೆ ಕಚೇರಿಗೆ ಬಂದಿದ್ದರಿಂದ ಜನ ಜಂಗುಳಿ ಹೆಚ್ಚಾಗಿತ್ತು. ನಿಗದಿತ ಅವಧಿಯೊಳಗೆ ಬಂದವರಿಗೆ ಅಧಿಕಾರಿಗಳು ಟೋಕನ್ ವಿತರಿಸಿ ಕಚೇರಿಗೆ ಬೀಗ ಹಾಕಿಸಿ ರಾತ್ರಿ 7 ಗಂಟೆಯ ತನಕ ನಾಮಪತ್ರ ಸ್ವೀಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.