ಮುಳಬಾಗಿಲು: ತಾಲ್ಲೂಕಿನ ಆವಣಿಯಲ್ಲಿ ಹೊಸ ಶಾಸನವೊಂದು ಪತ್ತೆಯಾಗಿದೆ. ಹದಿನಾಲ್ಕು ಸಾಲುಗಳಿರುವ ಈ ಶಾಸನದಲ್ಲಿ ಯಾವುದೇ ರಾಜನ ಹೆಸರು ಉಲ್ಲೇಖವಾಗಿಲ್ಲ. ಆದಾಗ್ಯೂ, ಆಂತರಿಕ ಕಾರಣಗಳಿಂದಾಗಿ ಈ ಶಾಸನವು ಕುಲೋತ್ತುಂಗನೆಂಬ ಚೋಳರಾಜನ ಕಾಲದ್ದು ಇರಬಹುದು ಎಂದು ಶಾಸನತಜ್ಞ ಕೆ.ಆರ್. ನರಸಿಂಹನ್ ತಿಳಿಸಿದ್ದಾರೆ.
ಇದು 1090ರ ಅವಧಿಗೆ ಸೇರಿದ ಇದು ದಾನ ಶಾಸನವಾಗಿದೆ. ವೀಪೂಷಣೀಶ್ವರ ಎಂದು ಕರೆಯಲಾಗುವ ಶಾಸನದಲ್ಲಿ ದೇವರಿಗೆ ನಂದಾದೀಪಕ್ಕಾಗಿ 27 ಹಸುಗಳನ್ನು ಮೂವರು ಬ್ರಾಹ್ಮಣರಿಗೆ ನೀಡುತ್ತಾರೆ ಎಂಬ ಮಾಹಿತಿ ಇದ್ದು, ನರಿಯರೂರಿನ ಕುವಲೈಯ ಸುಂದರನ್ ಮತ್ತು ಸೂರ್ಯನ್ ಚಕ್ರಪಾಣಿ ವಿಕ್ರಮಚೋಳ ಮೂವೆಂಡವೇಲನ್ ಎಂಬುವರು ಹೆಸರುಗಳಿವೆ ಎಂದಿದ್ದಾರೆ.
ಆವಣಿಯಲ್ಲಿರುವ ದೇವಾಲಯಗಳ ಜೊತೆಗೆ ವಿಭೀಷಣ ದೇವಾಲಯವೂ ಇತ್ತು ಎಂಬ ವಿಚಾರ ಈಗ ಪತ್ತೆಯಾದ ಶಾಸನದಿಂದ ತಿಳಿದುಬಂದಿದೆ. ಇದರಿಂದ ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವ ಪಡೆದಂತಾಗಿದೆ.
ಇತಿಹಾಸ ತಜ್ಞ ಕೆ.ಆರ್. ನರಸಿಂಹನ್, ಡಾ. ಅರಿವು ಶಿವಪ್ಪ, ಕೆ. ಧನಪಾಲ್, ಗೋಪಿ, ತಮಿಳುನಾಡು ಕೃಷ್ಣಗಿರಿಯ ಸಂಶೋಧಕ ಗೋವಿಂದರಾಜನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.