ADVERTISEMENT

ಮುಳಬಾಗಿಲು: ಗುಜರಿ ಗಾಡಿಗೆ ದಾರಿ ಬಿಡಿ!

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 6:42 IST
Last Updated 4 ನವೆಂಬರ್ 2025, 6:42 IST
<div class="paragraphs"><p>ಮುಳಬಾಗಿಲು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಬಳಕೆ ಮಾಡುತ್ತಿರುವ ಕಾರು</p></div>

ಮುಳಬಾಗಿಲು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಬಳಕೆ ಮಾಡುತ್ತಿರುವ ಕಾರು

   

ಮುಳಬಾಗಿಲು: ಬಳಸಲು ಯೋಗ್ಯವಲ್ಲ ಎಂದು ಸಾರಿಗೆ ಇಲಾಖೆ ದಂಡ ವಿಧಿಸಿದ ಮೇಲೂ 17 ವರ್ಷಗಳ ಹಳೆಯದಾದ ವಾಹನವನ್ನು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಳಸುತ್ತಿದ್ದಾರೆ.

15 ವರ್ಷ ಬಳಸಿದ ನಂತರ ಮೋಟಾರು ವಾಹನಗಳ ನಿಯಮಗಳ ಪ್ರಕಾರ ಈ ವಾಹನಕ್ಕೆ ಸಾರಿಗೆ ಇಲಾಖೆಯಿಂದ ಫಿಟ್‌ನೆಸ್‌ ಸೆರ್ಟಿಫಿಕೆಟ್‌ ಪಡೆದಿಲ್ಲ. ಬಳಸಲು ಯೋಗ್ಯವಲ್ಲದ ಈ ವಾಹನಕ್ಕೆ ದಂಡ ಕೂಡ
ವಿಧಿಸಲಾಗಿದೆ. 

ADVERTISEMENT

ಈ ವಾಹನ ರಸ್ತೆಯಲ್ಲಿ ಹೊರಟರೆ ಕರ್ಕಶ ಶಬ್ದ ಕೇಳಿ, ಅದು ಬಿಡುವ ಹೊಗೆ ಕಂಡು ಜನರು ಬಿಇಒ ವಾಹನ ಬಂತಾ ಎಂದು ಕೇಳುವಷ್ಟು ಈ ವಾಹನ ಕುಖ್ಯಾತಿ ಪಡೆದಿದೆ. ಭಾರಿ ಕರ್ಕಶ ಸದ್ದಿನ ಜೊತೆ ರಸ್ತೆಯಲ್ಲಿ ದಟ್ಟವಾದ ಹೊಗೆ ಆವರಿಸಿದ್ದರೆ ಬಿಇಒ ವಾಹನ ಈ ರಸ್ತೆಯಲ್ಲಿ ಹಾಯ್ದು ಹೋಗಿದೆ ಎಂದರ್ಥ! ಒಟ್ಟೊಟ್ಟಿಗೆ ವಾಯು ಹಾಗೂ ಶಬ್ದ ಮಾಲಿನ್ಯಕ್ಕೆ ಶಿಕ್ಷಣ ಇಲಾಖೆಯ ವಾಹನದ ಕೊಡುಗೆ ದೊಡ್ಡದು!

ಸುಪ್ರೀಂ ಕೋರ್ಟ್ ಆದೇಶದಂತೆ 15 ವರ್ಷ ಬಳಕೆಯ ವಾಹನವನ್ನು ಯಾರೂ ಬಳಸದೆ ಗುಜರಿಗೆ ಹಾಕಬೇಕು ಅಥವಾ ರಸ್ತೆಯಲ್ಲಿ ಸಂಚರಿಸಬಾರದು ಎಂಬ ಆದೇಶವಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಹಲವು ಬಾರಿ ರಸ್ತೆ ಸಂಚರಿಸುವಾಗ ತಡೆದು ವಾಹನ ಬಳಕೆಗೆ ಯೋಗ್ಯವಲ್ಲ. ಗುಜರಿಗೆ ಹಾಕಿ ಎಂದು ಹೇಳಿದ್ದಾರೆ. ಜೊತೆಗೆ ಎರಡು ಬಾರಿ ದಂಡ ವಿಧಿಸಿದ್ದಾರೆ. ಆದರೂ ಅಧಿಕಾರಿಗಳು ಅದೇ ವಾಹನ ಬಳಸಿದ್ದರಿಂದ ಫಿಟ್‌ನೆಸ್‌ ಫೈಲ್ ಮಾಡಿದ್ದಾರೆ.

ತೀರಾ ಹಳೆಯದಾದ 
ವಾಹನವ ಬದಲಿಸಿ ನೂತನ ವಾಹನ ನೀಡುವಂತೆ ಅಥವಾ ಹಳೆಯ ವಾಹನವನ್ನು ಇಲಾಖೆ ವಾಪಸ್ ಪಡೆದು ಗುಜರಿಗೆ ಹಾಕುವಂತೆ ಹಲವಾರು ಬಾರಿ ಸಂಬಂಧಿಸಿದ
ಇಲಾಖೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ರಾಮಚಂದ್ರಪ್ಪ.

ಹೊಸ ಕಾರು ಅದಲು–ಬದಲು 

2023ರಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಇಲಾಖೆ ನೂತನ ಕಾರು ನೀಡಿತ್ತು. ಆದರೆ, ಆಗಿನ ಜಿಲ್ಲಾ ಉಪ ನಿರ್ದೇಶಕರು ಹೊಸ ಕಾರನ್ನು ತಮ್ಮ ಬಳಕೆಗೆ ಇಟ್ಟುಕೊಂಡು ತಾವು ಬಳಸುತ್ತಿದ್ದ ಹಳೆಯ ಕಾರನ್ನು ಮುಳಬಾಗಿಲು ಬಿಇಒಗೆ ನೀಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.  

ತೀರಾ ಹಳೆಯ ವಾಹನ ಬಳಕೆ ಕಾನೂನಿನ ಪ್ರಕಾರ ಅಪರಾಧ. ಹಾಗಾಗಿ ಹಳೆಯ ವಾಹನ ವಾಪಸ್ ಪಡೆದು ಹೊಸ ವಾಹನ ನೀಡುವಂತೆ ಹಲವಾರು ಬಾರಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇನ್ನೂ ವಾಹನ ಬದಲಿಸಿ ಕೊಟ್ಟಿಲ್ಲ. ಶಾಸಕರಿಗೂ ಈ ಬಗ್ಗೆ ತಿಳಿಸಲಾಗಿದೆ.
ಎನ್.ರಾಮಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.