ADVERTISEMENT

ಮುಳಬಾಗಿಲು: ಪಿಒಪಿ ಗಣಪನ ವಿಗ್ರಹಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 5:57 IST
Last Updated 27 ಆಗಸ್ಟ್ 2025, 5:57 IST
ನೆರೆಯ ಆಂಧ್ರಪ್ರದೇಶ ಗಂಡ್ರಾಜುಪಲ್ಲಿಯಲ್ಲಿ ಪಿಒಪಿ ಗಣೇಶ ಮೂರ್ತಿಯನ್ನು ಖರೀದಿಸಿ ಕೊಂಡೊಯ್ಯುತ್ತಿದ್ದ ದೃಶ್ಯ
ನೆರೆಯ ಆಂಧ್ರಪ್ರದೇಶ ಗಂಡ್ರಾಜುಪಲ್ಲಿಯಲ್ಲಿ ಪಿಒಪಿ ಗಣೇಶ ಮೂರ್ತಿಯನ್ನು ಖರೀದಿಸಿ ಕೊಂಡೊಯ್ಯುತ್ತಿದ್ದ ದೃಶ್ಯ   

ಮುಳಬಾಗಿಲು: ಗಣೇಶ ಹಬ್ಬದ ಪ್ರಯುಕ್ತ ಹಣ್ಣು ಹಾಗೂ ಹೂವು ಬೆಲೆ ಗಗನಕ್ಕೆ ಏರಿದೆ. ಸಾರ್ವಜನಿಕರು ಹಬ್ಬದ ಸಾಮಗ್ರಿ ಖರೀದಿಸಲು ಮುಗಿಬಿದ್ದ ದೃಶ್ಯ ಕಂಡು ಬಂದಿತು.

ತಾಲ್ಲೂಕಿನ ನಂಗಲಿ, ಮಲ್ಲನಾಯಕನಹಳ್ಳಿ, ಆವಣಿ, ಬೈರಕೂರು, ಹೆಬ್ಬಣಿ ಮತ್ತಿತರ ಕಡೆ ಗ್ರಾಹಕರು ಹಬ್ಬದ ಸಾಮಗ್ರಿ ಖರೀದಿಸಿದರು.

ಮುಳಬಾಗಿಲು ನಗರದ ಕೆಇಬಿ ವೃತ್ತ, ಡಿವಿಜಿ ವೃತ್ತ, ಬಜಾರು ರಸ್ತೆ, ಹಳೆ ಕೋರ್ಟ್ ಮುಂಭಾಗ, ಕೆ.ಬೈಯಪ್ಪನಹಳ್ಳಿ ರಸ್ತೆ, ಮುತ್ಯಾಲಪೇಟೆ ರಸ್ತೆ ಮತ್ತಿತರ ಕಡೆ ಜನಜಂಗುಳಿಯೇ ನೆರದಿತ್ತು. 

ADVERTISEMENT

ಪಿಒಪಿ ಗಣೇಶ ಮಾರಾಟ: ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಆರ್.ರವಿಶಂಕರ್, ತಹಶಿಲ್ದಾರ್ ವಿ.ಗೀತಾ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸರ್ವೇಶ್ ಮತ್ತು ನಗರಸಭೆ ಪೌರಾಯುಕ್ತ ವಿ.ಶ್ರೀಧರ್ ಹಾಗೂ ತಾಲ್ಲೂಕು ಅಗ್ನಿಶಾಮಕ, ಬೆಸ್ಕಾಂ ಮತ್ತಿತರ ಇಲಾಖೆಗಳ ಅಧಿಕಾರಿಗಳು ಪಿಒಪಿ ಗಣೇಶ ವಿಗ್ರಹಗಳ ಮಾರಾಟ ಕಾನೂನು ಬಾಹಿರ ಎಂದು ಅರಿವು ಮೂಡಿಸಿದರೂ ಕೆಲವಡೆ ಮಾರಾಟ ಮಾಡುತ್ತಿದ್ದು ಕಂಡು ಬಂದಿತು. 

ತಾಲ್ಲೂಕಿನ ನಂಗಲಿಗೆ ಹೊಂದಿಕೊಂಡಂತೆ ಇರುವ ನೆರೆಯ ಆಂಧ್ರಪ್ರದೇಶದ ಗಂಡ್ರಾಜುಪಲ್ಲಿ, ಹೆಬ್ಬಣಿ ಸಮೀಪದ ಕುಮ್ಮರಗುಂಟ, ತಾಯಲೂರು ಸಮೀಪದ ವಿ.ಕೋಟೆ ಗಡಿ, ಗೂಕುಂಟೆ ಸಮೀಪದ ರಾಮಸಂದ್ರ ಮತ್ತಿತರರ ಕಡೆ ಆಂಧ್ರಪ್ರದೇಶದ ತಯಾರಕರು ಮಾಡಿರುವ ಪಿಒಪಿ ಗಣೇಶನ ವಿಗ್ರಹಗಳನ್ನು ತಾಲ್ಲೂಕಿನ ಕೆಲವರು ಖರೀದಿಸಿ ಟ್ರ್ಯಾಕ್ಟರ್, ಟೆಂಪೊಗಳಲ್ಲಿ ಸಾಗಿಸಿಕೊಂಡು ಬರುತ್ತಿದ್ದ ದೃಶ್ಯ ಕಂಡು ಬಂದಿತು. 

ಆಂಧ್ರಪ್ರದೇಶದ ಕುಮ್ಮರಗುಂಟೆಯಿಂದ ಹೆಬ್ಬಣಿ ರಸ್ತೆಯ ಮೂಲಕ ಎನ್.ವಡ್ಡಹಳ್ಳಿ ಕಡೆಗೆ ವಾಹನದಲ್ಲಿ ಸಾಗಿಸುತ್ತಿರುವ ಪಿಒಪಿ ಗಣೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.