ADVERTISEMENT

ಕೋರ್ಟ್‌ ಎದುರು ಬಸ್ ನಿಲುಗಡೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 5:57 IST
Last Updated 27 ಸೆಪ್ಟೆಂಬರ್ 2021, 5:57 IST
ಮುಳಬಾಗಿಲು ನಗರದ ನ್ಯಾಯಾಲಯದ ಮುಂದೆ ರಾಜ್ಯ ಸಾರಿಗೆ ಬಸ್‌ ನಿಲುಗಡೆ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಚಾಲನೆ ನೀಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್ ಯಾದವಾಡ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕಾಂತಮ್ಮ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಶ್ರೀನಿವಾಸ್‌ ರೆಡ್ಡಿ, ಗೌರವಾಧ್ಯಕ್ಷ ಪಿ.ಎಂ. ಸದಾಶಿವಯ್ಯ, ಕಾರ್ಯದರ್ಶಿ ಸಿ. ಸುಬ್ರಮಣ್ಯಂ ಹಾಜರಿದ್ದರು

ಮುಳಬಾಗಿಲು: ‘ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು, ವಕೀಲರು, ಸಿಬ್ಬಂದಿಗೆ ಅನುಕೂಲವಾಗುವ ದೃಷ್ಟಿಯಿಂದ ನ್ಯಾಯಾಲಯದ ಎದುರು ರಾಜ್ಯ ರಸ್ತೆ ಸಾರಿಗೆ ಬಸ್‌ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ನುಡಿದರು.

ನಗರದ ನ್ಯಾಯಾಲಯದ ಮುಂದೆ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ನಿಲುಗಡೆಗೆ ಚಾಲನೆ ನೀಡಿ ಮಾತನಾಡಿದರು.

ಡಿಪೊ ವ್ಯವಸ್ಥಾಪಕ ಅನ್ಸರ್ ಮಾತನಾಡಿ, ಸಾಮಾನ್ಯ ಬಸ್‌ಗಳಿಗೆ ₹ 5 ಹಾಗೂ ಎಕ್ಸ್‌ಪ್ರೆಸ್ ಬಸ್‌ಗಳಿಗೆ
₹ 10 ದರ ನಿಗದಿಪಡಿಸಲಾಗಿದೆ ಎಂದರು.

ADVERTISEMENT

ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್ ಯಾದವಾಡ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕಾಂತಮ್ಮ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಶ್ರೀನಿವಾಸ್ ರೆಡ್ಡಿ, ಪಿ.ಎಂ. ಸದಾಶಿವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.