ADVERTISEMENT

ಬೇತಮಂಗಲ | ಅಗೆದ ರಸ್ತೆ ದುರಸ್ತಿ ಮಾಡದ ಅಧಿಕಾರಿಗಳು: ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 13:59 IST
Last Updated 11 ಜೂನ್ 2025, 13:59 IST
ಬೇತಮಂಗಲ ಸಮೀಪದ ತಲ್ಲಪಲ್ಲಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಗೆ ರಸ್ತೆ ಅಗೆದು 6 ತಿಂಗಳಾದರೂ, ಇನ್ನೂ ಮುಚ್ಚದ ಗುತ್ತಿಗೆದಾರರು
ಬೇತಮಂಗಲ ಸಮೀಪದ ತಲ್ಲಪಲ್ಲಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಗೆ ರಸ್ತೆ ಅಗೆದು 6 ತಿಂಗಳಾದರೂ, ಇನ್ನೂ ಮುಚ್ಚದ ಗುತ್ತಿಗೆದಾರರು   

ಬೇತಮಂಗಲ: ಜಲ ಜೀವನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರು ಕಲ್ಪಿಸುವ ಉದ್ದೇಶದಿಂದ ತಲ್ಲಪಲ್ಲಿ ಗ್ರಾಮದಲ್ಲಿ ಪೈಪ್ ಅಳವಡಿಕೆಗಾಗಿ ಅಗೆದ ರಸ್ತೆಯನ್ನು ದುರಸ್ತಿ ಮಾಡಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಮನೆ–ಮನೆಗೂ ನಲ್ಲಿ ಅಳವಡಿಸಲು ಗ್ರಾಮದ ಎಲ್ಲ ರಸ್ತೆಗಳನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. 

ಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲ್ಲಪಲ್ಲಿ ಗ್ರಾಮದಲ್ಲಿ ಸುಮಾರು 5–6 ತಿಂಗಳ ಹಿಂದೆಯೇ ಜಲ ಜೀವನ್ ಯೋಜನೆಯ ಪೈಪುಗಳನ್ನು ಅಳವಡಿಸಲು ರಸ್ತೆಗಳನ್ನು ಕತ್ತರಿಸಲಾಗಿತ್ತು. ಆದರೆ, ಇದುವರೆಗೂ ಜಲ ಜೀವನ್ ಯೋಜನೆಯ ಗುತ್ತಿಗೆದಾರರು ರಸ್ತೆ ದುರಸ್ತಿಪಡಿಸಿಲ್ಲ. ಗುತ್ತಿಗೆದಾರರು ರಸ್ತೆಯ ಮಧ್ಯದಲ್ಲಿ ಕತ್ತರಿಸಿರುವುದರಿಂದ ಯಾವುದೇ ರಸ್ತೆಯಲ್ಲೂ ಸಹ ವಾಹನಗಳ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ರಸ್ತೆ ಕತ್ತರಿಸಿರುವ ಜಾಗದಲ್ಲಿ ಸುಮಾರು 1/2 ಅಡಿ ಎಷ್ಟು ಗುಂಡಿ ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದರು. 

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗುತ್ತಿಗೆದಾರರ ಕೈಗೊಂಬೆಗಳ ರೀತಿ ವರ್ತಿಸುತ್ತಿದ್ದಾರೆ ಎಂದು ದೂರಿದರು. 

ADVERTISEMENT

ಒಂದು ವರ್ಷದ ಹಿಂದಷ್ಟೇ ಗ್ರಾಮದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಇದೀಗ ಎಲ್ಲ ರಸ್ತೆಗಳು ಜಲಜೀವನ್ ಯೋಜನೆಯ ಗುತ್ತಿಗೆದಾರರಿಂದ ನಾಶವಾಗಿವೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಜಯರಾಮ್ ರೆಡ್ಡಿ ಆಕ್ರೋಶ ಹೊರಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.