ADVERTISEMENT

ಕ್ರಿಶ್ಚಿಯನ್‌ ಸಮುದಾಯದಿಂದ ಪಾಮ್‌ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 14:39 IST
Last Updated 13 ಏಪ್ರಿಲ್ 2025, 14:39 IST
ಕೆಜಿಎಫ್‌ ರಾಬರ್ಟಸನ್‌ಪೇಟೆಯಲ್ಲಿ ಭಾನುವಾರದಂದು ಕ್ರಿಶ್ಚಿಯನ್‌ ಸಮುದಾಯದವರು ಪಾಮ್‌ ದಿನಾಚರಣೆ ಅಂಗವಾಗಿ ಮೆರವಣಿಗೆ ನಡೆಸಿದರು
ಕೆಜಿಎಫ್‌ ರಾಬರ್ಟಸನ್‌ಪೇಟೆಯಲ್ಲಿ ಭಾನುವಾರದಂದು ಕ್ರಿಶ್ಚಿಯನ್‌ ಸಮುದಾಯದವರು ಪಾಮ್‌ ದಿನಾಚರಣೆ ಅಂಗವಾಗಿ ಮೆರವಣಿಗೆ ನಡೆಸಿದರು    

ಕೆಜಿಎಫ್‌: ಯೇಸು ಕ್ರಿಸ್ತ ಜರುಸೇಲಂ ಪ್ರವೇಶ ಮಾಡಿದ ನೆನಪಿನಲ್ಲಿ ಭಾನುವಾರದಂದು ನಗರದಲ್ಲಿ ಕ್ರಿಶ್ಚಿಯನ್‌ ಸಮುದಾಯದವರು ಮೆರವಣಿಗೆ ನಡೆಸಿದರು.

ಕೈಯಲ್ಲಿ ಅಡಿಕೆ ಎಲೆಗಳನ್ನು ಹಿಡಿದುಕೊಂಡಿದ್ದ ಸಮುದಾಯದವರು ರಾಬರ್ಟಸನ್‌ಪೇಟೆ ಮತ್ತು ಕೋರಮಂಡಲ್‌ ಪ್ರದೇಶದಲ್ಲಿ ಪ್ರತ್ಯೇಕ ಮೆರವಣಿಗೆ ನಡೆಸಿದರು. ಪವಿತ್ರ ವಾರದ ಆಚರಣೆಗೆ ಯೇಸು ಜರುಸೇಲಂಗೆ ಬರುವ ಸಂದರ್ಭದಲ್ಲಿ ಅಲ್ಲಿನ ಜನರು ಪಾಮ್ ಎಲೆಗಳನ್ನು ಹಿಡಿದು ಯೇಸುವನ್ನು ಸ್ವಾಗತಿಸುತ್ತಾರೆ. ಈ ಸಂದರ್ಭದಲ್ಲಿ ಹೊಸನ್ನ ಎಂದು ಜಯಘೋಷ ಕೂಗುತ್ತಾರೆ.

ಅದೇ ಮಾದರಿಯಲ್ಲಿ ಮೆರವಣಿಗೆಯಲ್ಲಿ ಯೇಸು ವೇಷಧಾರಿಗಳು, ಅಂದಿನ ಜನರ ವೇಷಭೂಷಣಗಳನ್ನು ಧರಿಸಿದ ಯುವಕರು ಮತ್ತು ಯುವತಿಯರು ಮೆರವಣಿಗೆ ಕೇಂದ್ರ ಬಿಂದುವಾಗಿದ್ದರು. ದೊಡ್ಡ ಶಿಲುಬೆಯನ್ನು ಹೊತ್ತು ಅವರು ನಗರದ ಮುಖ್ಯ ಬೀದಿಗಳಲ್ಲಿ ಸಾಗಿದರು. ವಿವಿಧ ಚರ್ಚ್‌ಗಳ ಮುಖ್ಯಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.