ಮುಳಬಾಗಿಲು: ನಗರದ ಎಂ.ಸಿ.ರಸ್ತೆಯಲ್ಲಿರುವ ಸುಮಾರು ಅಂಗಡಿಗಳಿಗೆ ರಫ್ತು ಮಾಡಲು ಅಕ್ರಮವಾಗಿ ಸಂಗ್ರಹಿಸಿದ್ದ 550 ಕೆಜಿ ತೂಕದ ಪ್ಲಾಸ್ಟಿಕನ್ನು ನಗರಸಭೆ ಅಧಿಕಾರಿಗಳು ವಶಕ್ಕೆ ಪಡೆದು ಮಂಗಳವಾರ ದಂಡ ವಿಧಿಸಿದ್ದಾರೆ.
ನಗರದಲ್ಲಿ ಈಚೆಗೆ ಸುಮಾರು ದಿನಗಳಿಂದಲೂ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಿ, 40 ಮೈಕ್ರಾನ್‌ಗಿಂತ ಕಡಿಮೆ ಪ್ಲಾಸ್ಟಿಕ್ ಬಳಸದಂತೆ ತಿಳಿ ಹೇಳಲಾಗಿತ್ತು. ಆದರೂ, ಈಚೆಗೆ ಸುಮಾರು ಆರು ದಿನಗಳಿಂದಲೂ ಪ್ಲಾಸ್ಟಿಕ್ ಅಂಗಡಿಗಳ ಮೇಲೆ ದಾಳಿ ಮಾಡಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಆದರೂ, ಮಂಗಳವಾರ ದಾಳಿ ನಡೆಸಿದಾಗ ನಗರಕ್ಕೆ ಸರಬರಾಜು ಮಾಡಲು ಇಟ್ಟಿದ್ದ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಯಿತು. ಪ್ಲಾಸ್ಟಿಕ್ ರಫ್ತುದಾರರಿಗೆ ₹10 ಸಾವಿರ ದಂಡ ವಿಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ನೋಡಲ್ ಅಧಿಕಾರಿ ಸುನಿಲ್ ಕುಮಾರ್ ಹೇಳಿದರು.
ಹಿರಿಯ ಆರೋಗ್ಯಾಧಿಕಾರಿ ಪ್ರತಿಭಾ, ಶಂಕರ್, ರಾಜೇಶ್, ನಾರಾಯಣಸ್ವಾಮಿ, ವೆಂಕಟರಾಮ, ಸುರೇಶ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.