ಮುಳಬಾಗಿಲು: ತಹಶೀಲ್ದಾರ್ ಕಚೇರಿ ಹಿಂಭಾಗದಲ್ಲಿ ವಿದ್ಯುತ್ ಪರಿವರ್ತಕ ವಾಲಿಕೊಂಡಿದ್ದು ಬೀಳುವ ಸ್ಥಿತಿಯಲ್ಲಿ ಇದೆ. ಕೂಡಲೇ ಪರಿವರ್ತಕ ಸರಿಪಡಿಸದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಪರಿವರ್ತಕ ಅಳವಡಿಸಿರುವ ಕಂಬದ ಸುತ್ತಲೂ ಸಾರ್ವಜನಿಕರು ಆಗಾಗ ಬಯಲು ಶೌಚಾಲಯ ಮಾಡಲು ಬಂದು ಹೋಗುತ್ತಾರೆ. ಅಂತಹ ಸಮಯದಲ್ಲಿ ಕಂಬ ಅಪ್ಪಿತಪ್ಪಿ ಬಿದ್ದರೂ ಸಾವು–ನೋವು ತಪ್ಪಿದ್ದಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.