ADVERTISEMENT

PUC Results | ವಾಣಿಜ್ಯ ವಿಭಾಗ: ಕೋಲಾರದ ಭಾರ್ಗವಿ ರಾಜ್ಯಕ್ಕೆ ಮೂರನೇ ರ್‍ಯಾಂಕ್‌

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 10:12 IST
Last Updated 8 ಏಪ್ರಿಲ್ 2025, 10:12 IST
   

ಕೋಲಾರ: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕೋಲಾರದ ‌ಭಾರ್ಗವಿ ರಾಜ್ಯಕ್ಕೆ ಮೂರನೇ ರ್‍ಯಾಂಕ್‌ ಪಡೆದಿದ್ದಾರೆ‌.

ಅವರು ಮಹಿಳಾ ‌ಸಮಾಜ ಪಿಯು ಕಾಲೇಜಿನಲ್ಲಿ ಓದಿದ್ದು, 597 ಅಂಕ ಪಡೆದಿದ್ದಾರೆ.

'ರ್‍ಯಾಂಕ್‌ ನಿರೀಕ್ಷೆ ಇರಲಿಲ್ಲ‌. ಉತ್ತಮ ಅಂಕ ಬರುವ ವಿಶ್ವಾಸ ಇತ್ತು. ಸಿ.ಎ ಮಾಡುವ ಗುರಿ ಹೊಂದಿದ್ದೇನೆ. ಅದಕ್ಕಾಗಿಯೇ ಕಾಮರ್ಸ್‌ ವಿಭಾಗಕ್ಕೆ ಸೇರಿದ್ದೆ‌‌. ಪೋಷಕರ ಒತ್ತಡ ಇರಲಿಲ್ಲ, ಪ್ರೋತ್ಸಾಹ ನೀಡಿದರು. ಎಸ್ ಎಸ್ ಎಲ್ ಸಿಯಲ್ಲಿ ಶೇ 98 ಅಂಕ (614) ಬಂದಿತ್ತು. ಬೆಳಗ್ಗಿನ ಅವಧಿಯಲ್ಲಿ ಹೆಚ್ಚು ಓದುತ್ತಿದ್ದೆ. ಕಾಲೇಜಿನಲ್ಲೂ ಪ್ರೋತ್ಸಾಹ ಸಿಕ್ಕಿತು. ಕನ್ನಡದಲ್ಲಿ 1 ಅಂಕ ಕಡಿಮೆ ಆಯಿತು. ಅಂದಿನ ಪಾಠವನ್ನು ಅಂದೇ ಓದುತ್ತಿದ್ದೆ' ಎಂದು ಭಾರ್ಗವಿ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ADVERTISEMENT

ಕೋಲಾರ ಜಿಲ್ಲೆಯು ಒಟ್ಟಾರೆ ಫಲಿತಾಂಶದಲ್ಲಿ ರಾಜ್ಯದಲ್ಲಿ 16 ನೇ ಸ್ಥಾನ ಪಡೆದಿದೆ. ಕಳೆದ ಬಾರಿ 12ನೇ ಸ್ಥಾನದಲ್ಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.