
ಮಾಲೂರು: ನಗರದಲ್ಲಿ ನಮ್ಮ ಕನ್ನಡ ಸೇನೆ ಸಂಘಟನೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಕಡತೂರು ಗ್ರಾಮದ ಗುರುಪ್ಪಶೆಟ್ಟಿ (65) 11 ಮುದ್ದೆ ತಿನ್ನುವ ಮೂಲಕ ಪ್ರಥಮ ಸ್ಥಾನ ಗಳಿಸಿದ್ದಾರೆ.
ನಿಗದಿತ ಸಮಯದಲ್ಲಿ ರಾಗಿ ಮುದ್ದೆ ಮತ್ತು ಕೋಳಿ ಸಾರು ತಿನ್ನುವ ಸ್ಪರ್ಧೆಯಲ್ಲಿ 9 ಮಂದಿ ಭಾಗವಹಿಸಿದ್ದರು. ಇದರಲ್ಲಿ ಗುರುಪ್ಪಶೆಟ್ಟಿ ಅವರು ಪ್ರಥಮ ಸ್ಥಾನ ಪಡೆದು ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ತನ್ನದಾಗಿಸಿಕೊಂಡಿದ್ದಾರೆ. ಕಡತೂರು ಗ್ರಾಮದ ಕೃಷ್ಣಪ್ಪ ಶೆಟ್ಟಿ 9 ಮುದ್ದೆ ತಿನ್ನುವ ಮೂಲಕ ದ್ವಿತೀಯ ಸ್ಥಾನ ಪಡೆದು ₹5 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಪಡೆದಿದ್ದಾರೆ. ತಲಾ 7 ಮುದ್ದೆ ತಿನ್ನುವ ಮೂಲಕ ನಾಗೇಶ್ ಹಾಗೂ ಅಂಬರೀಶ್ ಮೂರನೇ ಸ್ಥಾನ ಪಡೆದು ₹1.5 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ತನ್ನದಾಗಿಸಿಕೊಂಡಿದ್ದಾರೆ.
ಮಾಜಿ ಶಾಸಕ ಎ.ನಾಗರಾಜು, ಕೆ.ಎಸ್.ಮಂಜುನಾಥ ಗೌಡ, ರಾಜ್ಯಾಧ್ಯಕ್ಷ ಬಸವರಾಜ್ ಪಡಕೋಟೆ, ಎಂ.ವಿ.ಹನುಮಂತಪ್ಪ, ಚಾಕನಹಳ್ಳಿ ನಾಗರಾಜ್, ಆಟೊ ಶ್ರೀನಿವಾಸ್, ಕೋಡುರು ಗೋಪಾಲ್, ರವಿ, ಜಗದೀಶ್, ಅಶೋಕ್ ಕುಮಾರ್, ಚನ್ನಕೃಷ್ಣ, ಎಸ್.ಎಂ.ರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.