ಮುಳಬಾಗಿಲು: ತಾಲ್ಲೂಕಿನಲ್ಲಿ ಶುಕ್ರವಾರ ಬಿದ್ದ ಭಾರೀ ಮಳೆಗೆ ರಸ್ತೆಗಳಲ್ಲಿ ನೀರು ಹರಿಯಿತು.
ಶುಕ್ರವಾರ ಬೆಳ್ಳಂ ಬೆಳಿಗ್ಗೆಯೇ ಸುರಿಯಿತು. ಜೊತೆಗೆ ಸಂಜೆ 4 ಗಂಟೆಯಿಂದ 6 ಗಂಟೆವರೆಗೂ ಮಳೆ ಬೀಳುತ್ತಲೇ ಇತ್ತು. ನಂತರ ಜಡಿ ಮಳೆ ಸುರಿಯುತ್ತಿದ್ದು, ಜನ ಜನವಾರುಗಳ ಓಡಾಟಕ್ಕೆ ತೊಂದರೆಯುಂಟಾಯಿತು.
ಮಳೆ ನೀರಿನಿಂದ ಸಾಮಿಲ್ ಮುಂಭಾಗದ ರಸ್ತೆ ಸಂಪೂರ್ಣವಾಗಿ ಮುಳುಗಿ ಕುಂಟೆಯಂತಾಗಿತ್ತು. ಮುಖ್ಯರಸ್ತೆಯಲ್ಲಿ ಸುಮಾರು ಮೂರು ಅಡಿಗಳಿಗಿಂತಲೂ ಹೆಚ್ಚು ಆಳ ನೀರು ನಿಂತಿದ್ದು, ಸಂಚಾರಕ್ಕೆ ಕಷ್ಟವಾಗಿತ್ತು.
ರಾಷ್ಟ್ರೀಯ ಹೆದ್ದಾರಿ 75ರ ಉದ್ದಕ್ಕೂ ಬಸ್ ತಂಗುದಾಣಗಳಲ್ಲಿ ದ್ವಿಚಕ್ರ ವಾಹನ ಸವಾರರು ಆಶ್ರಯ ಪಡೆದರು. ಗ್ರಾಮೀಣ ಭಾಗದಲ್ಲಿ ಮನೆ ಮುಂದೆ ನೀರು ನಿಂತಿದ್ದು, ರಸ್ತೆಗಳಲ್ಲಿ ಕಸ, ಕಡ್ಡಿ ಕೊಚ್ಚಿ ಹೋಗುತ್ತಿದ್ದವು.
ನರಸಿಂಹ ತೀರ್ಥ, ವಿರುಪಾಕ್ಷಿ ರಸ್ತೆ, ನಂಗಲಿ, ಎನ್.ವಡ್ಡಹಳ್ಳಿ, ತಾಯಲೂರು ವೃತ್ತಗಳ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ನೀರು ನಿಂತು ಕುಂಟಗಳಂತಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.