
ಮುಳಬಾಗಿಲು: ತಾಲ್ಲೂಕಿನ ಬೈರಕೂರು ಹೋಬಳಿ ವ್ಯಾಪ್ತಿಯ ಕಾಡೇನಹಳ್ಳಿ, ಬಂಗವಾದಿ, ನಗವಾರ, ಪೆರಮಾಕನಹಳ್ಳಿ, ಪದ್ಮಘಟ್ಟ, ಎನ್.ವಡ್ಡಹಳ್ಳಿ, ತೊಂಡಹಳ್ಳಿ ಮತ್ತಿತರರ ಗ್ರಾಮಗಳಲ್ಲಿ ಸಿಸಿ ರಸ್ತೆ, ಹೈಮಾಸ್ಟ್ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಸೋಮವಾರ ಶಾಸಕ ಸಮೃದ್ಧಿ ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ‘ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ ಪಕ್ಷದ ಶಾಸಕರಿಗೆ ₹100 ಕೋಟಿ ಅನುದಾನ ನೀಡಿದರೆ, ನನಗೆ ಕೇವಲ ₹10 ಕೋಟಿ ನೀಡಿದ್ದಾರೆ. ಈ ಹಣವನ್ನು ಯಾವ ಅಭಿವೃದ್ಧಿಗೆ ಬಳಸಲಿ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು’.
‘ಆರ್‌ಎಸ್ಎಸ್, ಗ್ಯಾರಂಟಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಮುಖ್ಯಮಂತ್ರಿ ಸ್ಥಾನದ ಖುರ್ಚಿಗಳ ಕೆಸರೆರಚಾಟಗಳಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೊಲಗಲಿ’ ಎಂದು ಶಾಪ ಹಾಕಿದರು.
‘ನವೆಂಬರ್‌ನಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಕ್ರಾಂತಿಯಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಯಾವುದೇ ಕ್ರಾಂತಿಯೂ ನಡೆಯಲ್ಲ. ಏನೂ ಆಗಲ್ಲ ಕೇವಲ ಜನರ ದಿಕ್ಕು ತಪ್ಪಿಸುತ್ತಿದ್ದಾರಷ್ಟೇ’ ಎಂದರು.
ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್.ನಾಗರಾಜ್, ಶಿನಿಗೇನಹಳ್ಳಿ ಜಿ.ಆನಂದ ರೆಡ್ಡಿ, ರಘುಪತಿ ರೆಡ್ಡಿ, ಎಂ.ಆರ್.ಮುರಳಿ, ಶ್ರೀನಿವಾಸ ರೆಡ್ಡಿ, ನಗವಾರ ಸತ್ಯಣ್ಣ, ಎಂ.ಗೊಲ್ಲಹಳ್ಳಿ ಪ್ರಭಾಕರ್, ವರದಪ್ಪ, ಗೊಲ್ಲಹಳ್ಳಿ ಜಗದೀಶ್, ಲಕ್ಷ್ಮಿ ನಾರಾಯಣ, ಪ್ರಸಾದ್, ಎನ್.ಆರ್.ಎಸ್.ಮಂಜುನಾಥ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.