
ಕೋಲಾರ: ವಿಜ್ಞಾನಿ ಸರ್.ಸಿ.ವಿ.ರಾಮನ್‌ರ ಸ್ಮರಣೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಮಡೇರಹಳ್ಳಿಯ ಅರ್ಕಾ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಮಂಗಳವಾರ ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ವಸ್ತು ಪ್ರದರ್ಶನ ಉದ್ಘಾಟಿಸಿದ ಶಾಲೆ ಮುಖ್ಯಸ್ಥ ವೇಣುಗೋಪಾಲ್. ‘ವಿಜ್ಞಾನ ಬದುಕಿನ ಜೀವಾಳವಾಗಿದ್ದು, ಪ್ರತಿ ಹಂತದಲ್ಲೂ ಅದರ ಅಗತ್ಯವಿದೆ. ವಿಜ್ಞಾನದಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ದೇಶದ ಭವಿಷ್ಯದ ಪ್ರಜೆಗಳಾದ ಮಕ್ಕಳು ವಿಜ್ಞಾನ, ಕಲೆ, ಸಾಹಿತ್ಯದ ವಿಷಯದಲ್ಲಿ ಆಸಕ್ತಿ ವಹಿಸಬೇಕು. ಉತ್ತಮ ಕಲಿಕೆಯೊಂದಿಗೆ ದೇಶದ ಭವ್ಯ ಪ್ರಜೆಗಳಾಗಿ ಹೊರಹೊಮ್ಮಬೇಕು. ಭಾರತದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ಬೆಳೆಸಿದ ಸಿ.ವಿ.ರಾಮನ್‌ರ ಆದರ್ಶ ಪಾಲಿಸಬೇಕು’ ಎಂದು ಸಂಸ್ಥೆ ಆಡಳಿತಾಧಿಕಾರಿ ಜೆ.ಎನ್.ರಾಮಕೃಷ್ಣ ಕಿವಿಮಾತು ಹೇಳಿದರು.
ಕಲಿಕೆಗೆ ಪೂರಕವಾದ ಮತ್ತು ಸೃಜನಾತ್ಮಕವಾಗಿ ಮಕ್ಕಳು ತಯಾರಿಸಿರುವ ವಿವಿಧ ಪಟಗಳು ಹಾಗೂ ಮಾದರಿಗಳನ್ನು ವೀಕ್ಷಿಸಿದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕಿ ಕೆ ಗಿರಿಜಾ, ಶಿಕ್ಷಕಿಯರಾದ ಸುಮಲತಾ, ರೋಸ್ ಲೀನ್ ಮೇರಿ, ವಿ.ಸುಷ್ಮಾ, ಎಸ್.ಮರ್ಲಿನ್, ಆರ್.ಹಂಸವೇಣಿ, ವನಜಾಕ್ಷಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.