ADVERTISEMENT

ಸಿದ್ದರಾಮಯ್ಯ ಮುಂದೆ ಕಳಚಿ ಬಿದ್ದ ಬೃಹತ್ ಗಾತ್ರದ ಹಾರ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 12:50 IST
Last Updated 13 ನವೆಂಬರ್ 2022, 12:50 IST
ಸಿದ್ದರಾಮಯ್ಯ ಮುಂದೆ ಕಳಚಿ ಬಿದ್ದ ಬೃಹತ್ ಗಾತ್ರದ ಹಾರ
ಸಿದ್ದರಾಮಯ್ಯ ಮುಂದೆ ಕಳಚಿ ಬಿದ್ದ ಬೃಹತ್ ಗಾತ್ರದ ಹಾರ   

ಕೋಲಾರ: ಕ್ಲಾಕ್ ಟವರ್ ಹಾಗೂ ಮಸೀದಿ ಬಳಿಅವರಿಗೆ ಹಾಕಲು ಮುಸ್ಲಿಂ ಸಮುದಾಯದವರು ತಂದಿದ್ದ ಬೃಹತ್ ಗಾತ್ರದ ಹಾರ ಕ್ರೇನ್ ನಿಂದ ಕಳಚಿ ಬಿತ್ತು.

ಕೂದಲೆಳೆ ಅಂತರದಲ್ಲಿ ಸಿದ್ದರಾಮಯ್ಯ ಅಪಾಯದಿಂದ ಪಾರಾದರು. ಅವರ ಎದುರುಗಡೆಯೇ ಕಳಚಿ ಬಿತ್ತು.

---

ADVERTISEMENT

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯ

ಹುಬ್ಬಳ್ಳಿ: ‘ಸಿದ್ದರಾಮಯ್ಯ ಅವರು ಎಲ್ಲಿಗೇ ಹೋದರೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದಿಲ್ಲ. ಹಾಗಾಗಿ, ಪ್ರತಿ ಸಲ ಚುನಾವಣೆ ಬಂದಾಗ ಅಬ್ಬೇಪಾರಿಯಂತ ಕ್ಷೇತ್ರಗಳನ್ನು ಹುಡುಕಿಕೊಂಡು ಓಡಾಡುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುತ್ತಾರೆಂಬ ವಿಚಾರ ಕುರಿತು, ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಚಾಮುಂಡೇಶ್ವರಿಯಲ್ಲಿ ಕೆಲಸ ಮಾಡದ ಅವರನ್ನು ಜನ ಸೋಲಿಸಿ ಮನೆಗೆ ಕಳಿಸಿದರು. ಬಾದಾಮಿಯಲ್ಲಿ ಏನು ಪುಣ್ಯ ಇತ್ತೋ ಆರಿಸಿ ಬಂದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ದೊಡ್ಡ ನಾಯಕರಾದವರಿಗೆ ಇಂತಹ ಗತಿ ಬರಬಾರದಿತ್ತು’ ಎಂದರು.

‘ಕೋಲಾರಕ್ಕೆ ಬಂದಿರುವ ಸಿದ್ದರಾಮಯ್ಯ ಅವರಿಗೆ ಅಲ್ಲಿನ ಜನರು ಚಾಮುಂಡೇಶ್ವರಿಯಲ್ಲಿ ಏನು ಮಾಡಿದ್ರಿ? ಬಾದಾಮಿಯಲ್ಲಿ ಏನು ಮಾಡಿದ್ರಿ? ಎಂದು ಕೇಳಬೇಕು. ಅಲ್ಲಿಯೂ ಅವರನ್ನು ಸೋಲಿಸಿ ಮನೆಗೆ ಕಳಿಸಬೇಕು ಎಂದು ಅಲ್ಲಿನ ಜನರಿಗೆ ಹೇಳುವೆ. ಅಲ್ಲದೆ, ಇನ್ನು ಸ್ವಲ್ಪ ದಿನದಲ್ಲಿ ಅವರು ಯಾವ ಪಕ್ಷಕ್ಕೆ ಹೋಗುತ್ತಾರೆಂದು ಕಾದು ನೋಡೋಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.