ADVERTISEMENT

ಕೋಲಾರ ಜಿಲ್ಲೆಗೆ ಕಷ್ಣಾ ನದಿ ನೀರು ತರಲು ಯತ್ನ: ಸಂಸದ ಮಲ್ಲೇಶ್‌ ಬಾಬು ಭರವಸೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 7:30 IST
Last Updated 21 ಸೆಪ್ಟೆಂಬರ್ 2025, 7:30 IST
ಶ್ರೀನಿವಾಸಪುರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ರಾಜ್ಯ, ಜಿಲ್ಲೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರನ್ನು ಸನ್ಮಾನಿಸಲಾಯಿತು
ಶ್ರೀನಿವಾಸಪುರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ರಾಜ್ಯ, ಜಿಲ್ಲೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರನ್ನು ಸನ್ಮಾನಿಸಲಾಯಿತು   

ಶ್ರೀನಿವಾಸಪುರ: ಪಕ್ಕದ ಆಂಧ್ರಪ್ರದೇಶದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ನೀರನ್ನು ಕೇಂದ್ರ ಜಲಶಕ್ತಿ ಸಚಿವರು ಹಾಗೂ ಆಂದ್ರ ಮುಖ್ಯಮಂತ್ರಿ ಜೊತೆ ಚರ್ಚಿಸಿ ಅವಳಿ ಜಿಲ್ಲೆಗೆ ಅತಿಶೀಘ್ರವಾಗಿ ಹರಿಸಲು ಪ್ರಯತ್ನಿಸುವೆ ಎಂದು ಸಂಸದ ಎಂ.ಮಲ್ಲೇಶ್‌ ಬಾಬು ಭರವಸೆ ನೀಡಿದರು.

ಪಟ್ಟಣ ಹೊರವಲಯದ ಪುಂಗನೂರು ಕ್ರಾಸ್‍ನ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಶ್ರೀನಿವಾಸಪುರ ತಾಲ್ಲೂಕು ಎಸ್ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ 5 ನೇ ಬಾರಿ ಪ್ರಥಮ ಸ್ಥಾನ ಗಳಿಸಿರುವುದು ಶ್ಲಾಘನೀಯ. ಪ್ರಥಮ ಸ್ಥಾನ ಗಳಿಸಲು ಶ್ರಮಪಟ್ಟ ಶಿಕ್ಷಕರಿಗೂ ಸನ್ಮಾನ ಮಾಡಬೇಕು’ ಎಂದರು.

ADVERTISEMENT

ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಯೂ ಹೆಚ್ಚಿನ ಫಲಿತಾಂಶ ಬರಲು ಉಪನ್ಯಾಸಕರು ಶ್ರಮ ಹಾಕಬೇಕು. ಗುರುಭವನಕ್ಕೆ ₹ 10 ಲಕ್ಷ ಅನುದಾನ ಕೊಡುತ್ತೇನೆ. ಒಂದು ವರ್ಷದಲ್ಲಿ ಭವನ ನಿರ್ಮಾಣ ಮಾಡಲು ಬೇಕಾದ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ಎಸ್.ರೆಡ್ಡಪ್ಪ ಮಾತನಾಡಿ, ‘ಶಿಕ್ಷಕರದ್ದು ಪವಿತ್ರ ವೃತ್ತಿ. ನಾವು ಎಲ್ಲಿ ಕಾಣಿಸಿದರೂ ವಿದ್ಯಾರ್ಥಿಗಳು ನಮಸ್ಕಾರ ಹೇಳುವ ವೃತ್ತಿ ಎಂದರೆ ಶಿಕ್ಷಕ ವೃತ್ತಿ ಮಾತ್ರ. ಒಬ್ಬ ಎಂಜಿನಿಯರ್ ನೀಡುವ ಪ್ಲಾನ್‍ನಂತೆ ಕಟ್ಟಡ ಕಟ್ಟಿದರೆ ಬೀಳಬಹುದು. ಆದರೆ, ಒಬ್ಬ ಶಿಕ್ಷಕ ವಿದ್ಯಾರ್ಥಿಗೆ ವಿದ್ಯೆ ನೀಡಿದರೆ ಆದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದರು.

ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಜಿಲ್ಲೆಯ ಪ್ರಾಥಮಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಅಪ್ಪಯ್ಯಗೌಡ ಮಾತನಾಡಿದರು.

ರಾಜ್ಯ, ಜಿಲ್ಲೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರನ್ನು ಸನ್ಮಾನಿಸಲಾಯಿತು. ಇಒ ಸವೇಶ್, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ಪುರಸಭೆ ಉಪಾದ್ಯಕ್ಷೆ ಸುನಿತಾ, ಬಿಜೆಪಿ ಮಂಡಲ ಅಧ್ಯಕ್ಷ ಆರ್.ಎನ್.ಚಂದ್ರಶೇಖರ್, ತಾ.ಪಂ ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ಮುಖಂಡ ಬೀಮಗುಂಟಪಲ್ಲಿ ಬಿ.ವಿ.ಶಿವಾರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಘುನಾಥರೆಡ್ಡಿ, ಉಪಾಧ್ಯಕ್ಷ ಎಲ್.ಆನಂದ್, ಖಜಾಂಚಿ ಎನ್.ಬಿ.ವೇಣುಗೋಪಾಲ್, ಸಂಘಟನಾ ಕಾರ್ಯದರ್ಶಿ ವೆಂಕಟರಾಮರೆಡ್ಡಿ, ಸಹಕಾರ್ಯದರ್ಶಿಗಳಾದ ಎಲ್.ಶ್ರೀರಾಮ್, ಬಿ.ವಿ.ಅನಿತಾ, ರಾಜ್ಯ ನೌಕರರ ಸಂಘ ಮಹಿಳಾ ಘಟಕ ಅಧ್ಯಕ್ಷೆ ಎ.ಸುಜಾತ, ಪ್ರೌಡಶಾಲೆ ಸಹಶಿಕ್ಷಕ ಅಧ್ಯಕ್ಷ ಮುರಳಿಬಾಬು, ನಿಕಟಪೂರ್ವ ಅಧ್ಯಕ್ಷ ಬೈರಾರೆಡ್ಡಿ, ಬಿಆರ್‍ಸಿ ಕೆ.ಸಿ.ವಸಂತ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನ, ರಾಯಲ್ಪಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಜಿ.ಗಿರೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಸಿ.ಶಿವಣ್ಣ, ಸಹಕಾರ್ಯದರ್ಶಿ ಶಿವಾನಂದ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಾಮ ನಿರ್ದೇಶಕ ದಿವಾಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.