
ಪ್ರಜಾವಾಣಿ ವಾರ್ತೆ
ಮುಳಬಾಗಿಲು: ನಗರದ ಹೈದರ್ ಅವಾಲಿಯಾ ದರ್ಗಾ ಆವರಣದಲ್ಲಿ 771ನೇ ಉರುಸ್ ಅಂಗವಾಗಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಗುರುವಾರ ನಡೆಯಿತು.
ಜ.22 ರಿಂದ 26ರವರೆಗೆ ನಾನಾ ಬಗೆಯ ಕಾರ್ಯಕ್ರಮಗಳು ನಡೆದವು. ಗುರುವಾರ ರಾತ್ರಿ ಸಾವಿರಾರು ವೀಕ್ಷಕರ ಸಮ್ಮುಖದಲ್ಲಿ ಕುಸ್ತಿ ಪಂದ್ಯಾವಳಿ ಮುಕ್ತಾಯವಾಯಿತು. ಪಂದ್ಯದಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಜತೆಗೆ ರಾತ್ರಿ ಖವಾಲಿ ಕಾರ್ಯಕ್ರಮ ನಡೆಯಿತು.
ಶಾಸಕ ಸಮೃದ್ದಿ ಮಂಜುನಾಥ್, ವಿ.ಆದಿನಾರಾಯಣ, ಎಂ.ಸಿ.ನೀಲಕಂಠೇ ಗೌಡ, ಅಮಾನುಲ್ಲಾ, ರಿಯಾಜ್ ಅಹ್ಮದ್, ಕಾಡೇನಹಳ್ಳಿ ನಾಗರಾಜ್, ರಘುಪತಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.